alex Certify ‘ಬಿಗ್ ಬಿ’ ಅಂಗರಕ್ಷಕನಾಗಿದ್ದ ಪೇದೆ ಸಸ್ಪೆಂಡ್..! ಬೆಚ್ಚಿಬೀಳಿಸುವಂತಿದೆ ಇದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಿಗ್ ಬಿ’ ಅಂಗರಕ್ಷಕನಾಗಿದ್ದ ಪೇದೆ ಸಸ್ಪೆಂಡ್..! ಬೆಚ್ಚಿಬೀಳಿಸುವಂತಿದೆ ಇದರ ಹಿಂದಿನ ಕಾರಣ

ಕಳೆದ ವರ್ಷ ಆಗಸ್ಟ್​ ತಿಂಗಳವರೆಗೆ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಛನ್​​ರಿಗೆ ಅಂಗರಕ್ಷಕನಾಗಿ ಕೆಲಸ ಮಾಡಿದ್ದ ಮುಂಬೈ ಪೊಲೀಸ್​ ಪೇದೆಯನ್ನು ಕರ್ತವ್ಯ ಉಲ್ಲಂಘನೆ ಆರೋಪದ ಅಡಿಯಲ್ಲಿ ಅಮಾನತುಗೊಳಿಸಲಾಗಿದೆ.

ಕಾನ್​ಸ್ಟೇಬಲ್​ ಜೀತೇಂದ್ರ ಶಿಂಧೆಯನ್ನು ಅಮಾನತುಗೊಳಿಸಿ ನೋಟಿಸ್​ ನೀಡಲಾಗಿದ್ದು, ಇವರ ವಿರುದ್ಧ ಪೊಲೀಸ್​ ಇಲಾಖೆಯು ತನಿಖೆ ಆರಂಭಿಸಿದೆ ಎಂದು ಅಧಿಕಾರಿಯು ಮಾಹಿತಿ ನೀಡಿದ್ದಾರೆ.

ಶಿಂಧೆಯನ್ನು ಈ ಹಿಂದೆ ಮುಂಬೈನ ಪೊಲೀಸ್​​ ಇಲಾಖೆಯ ರಕ್ಷಣೆ ಹಾಗೂ ಭದ್ರತಾ ಶಾಖೆಯಲ್ಲಿ ನಿಯೋಜಿಸಲಾಗಿತ್ತು. ಶಿಂಧೆ 2015ರಿಂದ 2021ರ ಆಗಸ್ಟ್​ ತಿಂಗಳವರೆಗೆ ಅಮಿತಾಬ್ ಬಚ್ಛನ್​ರಿಗೆ ಅಂಗರಕ್ಷಕರಾಗಿ ಕೆಲಸ ಮಾಡಿದ್ದರು. ಶಿಂಧೆಯ ವಾರ್ಷಿಕ ಗಳಿಕೆಯು 1.5 ಕೋಟಿ ರೂಪಾಯಿ ಇದೆ ಎಂದು ಮುಂಬೈ ಪೊಲೀಸ್​ ಕಮಿಷನರ್​​ ಹೇಮಂತ್​ ನಗ್ರಾಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಶಿಂಧೆ ಅವರ ಅಮಾನತಿಗೆ ನಿಖರವಾದ ಕಾರಣವನ್ನು ಕೇಳಿದಾಗ, ಹಿರಿಯ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು, ಕಾನ್‌ಸ್ಟೇಬಲ್ ತನ್ನ ಮೇಲಾಧಿಕಾರಿಗಳಿಗೆ ತಿಳಿಸದೆ ಕನಿಷ್ಠ ನಾಲ್ಕು ಬಾರಿ ದುಬೈ ಮತ್ತು ಸಿಂಗಾಪುರಕ್ಕೆ ಪ್ರಯಾಣಿಸಿದ್ದಾರೆ ಎಂದು ಹೇಳಿದರು. ಸೇವಾ ನಿಯಮಗಳ ಪ್ರಕಾರ ವಿದೇಶಕ್ಕೆ ತೆರಳಲು ಹಿರಿಯ ಅಧಿಕಾರಿಗಳ ಅನುಮತಿ ಪಡೆಯಬೇಕಿತ್ತು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...