
ಹೌದು, ಬಿಗ್ ಬಾಸ್ ಮನೆ ಒಂದು ಆಟ ಕೊಟ್ಟರೆ ಇದೀಗ ಪ್ರಶಾಂತ್ ಸಂಬರ್ಗಿ ಮತ್ತೊಂದು ಆಟ ಆಡ್ತಾ ಇದ್ದಾರೆ. ಮನೆಯಲ್ಲಿ ದೆವ್ವ ಇದೆ. ಅದಕ್ಕಾಗಿಯೇ ನಿಂಬೆ ಹಣ್ಣು ಇಟ್ಟುಕೊಂಡು ಓಡಾಡ್ತಾ ಇದ್ದೀನಿ ಅಂತ ಸ್ಕ್ರಿಪ್ಟ್ ಬರೆದು ಸ್ಕ್ರೀನ್ ಪ್ಲೇ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಹೌದು, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಗೌಡ ಮಧ್ಯೆ ದೆವ್ವಗಳ ಬಗ್ಗೆ ಒಂದು ಚರ್ಚೆ ನಡೆಯುತ್ತದೆ. ಇದರಲ್ಲಿ ರೂಪೇಶ್ ಶೆಟ್ಟಿ ಬಲಿಕಾ ಬಕ್ರ ಆದ್ರಾ ಅನ್ನೋದು ಪ್ರಶ್ನೆ.
ಪ್ರಶಾಂತ್ ಸಂಬರ್ಗಿ ತನ್ನ ಜೇಬಿನಲ್ಲಿ ಲಿಂಬೆಹಣ್ಣು ಇಟ್ಟುಕೊಂಡಿದ್ದಾರೆ. ಹೀಗಾಗಿ ದೆವ್ವಗಳಿಂದ ರಕ್ಷಣೆ ಪಡೆದುಕೊಂಡಿದ್ದಾರಂತೆ. ಈ ಕುರಿತಂತೆ ರೂಪೇಶ್ ಶೆಟ್ಟಿ ಜೊತೆ ಕಾವ್ಯಾ ಮಾತಾಡುತ್ತಾರೆ. ಅವರಿಗೆ ಏನೋ ಧ್ವನಿ ಕೇಳುತ್ತಾ ಇದೆ. ಹಾಗಾಗಿ ಮಲಗುವಾಗ ಈರುಳ್ಳಿ ಇಟ್ಟುಕೊಂಡು ಮಲಗುತ್ತಾರೆ ಎಂಬಿತ್ಯಾದಿ ವಿಚಾರ ಹೇಳುತ್ತಾರೆ. ಹೀಗೆ ಹೇಳಿದ ನಂತರ ರೂಪೇಶ್ ಕೊಂಡ ಗಲಿಬಿಲಿಗೆ ಒಳಗಾಗುತ್ತಾರೆ. ನಿಜವಾಗಲೂ ದೆವ್ವ ಇದ್ಯಾ ಅಥವಾ ಪ್ರಾಂಕ್ ಏನಾದರೂ ಮಾಡ್ತಾ ಇದ್ದಾರೆ ಅನ್ನೋ ಅನುಮಾನ ರೂಪೇಶ್ ಗೆ ಇದೆ.