ಬಾಗಲಕೋಟೆ: ಮತ್ತೆ ಆರ್ ಎಸ್ ಎಸ್ ನಾಯಕರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್ ಎಸ್ ಎಸ್ ನವರದ್ದು ತಾಲಿಬಾನ್ ಸಂಸ್ಕೃತಿ. ತಾಲಿಬಾನಿಗಳದ್ದು ರಾಕ್ಷಸರ ಪ್ರವೃತ್ತಿ, ಇದೇ ಸಂಸ್ಕೃತಿಯನ್ನು ಆರ್ ಎಸ್ ನಾಯಕರು ಬೆಳೆಸಿಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆರ್ ಎಸ್ ಎಸ್ ನವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಆರ್ ಎಸ್ ನವರು, ಬಿಜೆಪಿಯವರಿಗೆ ಮನುಷತ್ವವೂ ಇಲ್ಲ. ರಾಕ್ಷಸರ ಗುಣಗಳನ್ನು ಹೊಂದಿದ್ದಾರೆ. ಹಾಗಾಗಿ ಯಾರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೋ, ಮನುಷ್ಯತ್ವ ಇಲ್ಲವೋ ಅಂತವರನ್ನು ತಾಲಿಬಾನಿಗಳು ಎಂದು ಕರೆಯುತ್ತಾರೆ. ಅದೇ ರೀತಿ ಆರ್ ಎಸ್ ಎಸ್, ಬಿಜೆಪಿ ನಾಯಕರಿಗೂ ನಾವು ತಾಲಿಬಾನಿ ಸಂಸ್ಕೃತಿಯವರು ಎಂದು ಕರೆಯುತ್ತಿದ್ದೇವೆ ಎಂದರು.
BIG NEWS: ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ; ಕೋರ್ ಕಮಿಟಿಯಲ್ಲಿ ಅಭ್ಯರ್ಥಿಗಳ ಬಗ್ಗೆ ನಿರ್ಧಾರ ಎಂದ ಸಿಎಂ ಬೊಮ್ಮಾಯಿ
ಅಧಿವೇಶನವನ್ನು 15 ದಿನಗಳ ಕಾಲ ನಡೆಸುವಂತೆ ಹೇಳಿದೆವು. ಆದರೆ ಸಿಎಂ ಬೊಮ್ಮಾಯಿ, ಸ್ಪೀಕರ್ ಕಾಗೇರಿ ನಮ್ಮ ಮಾತನ್ನು ಕೇಳಲಿಲ್ಲ. ಸ್ವತಃ ಸಿಎಂ ಬೊಮ್ಮಾಯಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಬಿಜೆಪಿ ನಾಯಕರು ತಪ್ಪು ಮಾಡಿದ್ದಾರೆ. ಹಾಗಾಗಿ ಈ ಬಗ್ಗೆ ಸದನದಲ್ಲಿ ಚರ್ಚೆಯಾಗಬಾರದು ಎಂಬ ಕಾರಣಕ್ಕೆ ಹತ್ತೇ ದಿನಕ್ಕೆ ಅಧಿವೇಶನವನ್ನು ಮುಗಿಸಿದರು ಎಂದು ಗುಡುಗಿದರು.