alex Certify ಬಿಕ್ಕಟ್ಟಿನ ಮಧ್ಯೆ ಇಮ್ರಾನ್‌ ರಷ್ಯಾ ಭೇಟಿ; ಪಾಕಿಸ್ತಾನದ ಇಬ್ಬಂದಿ ನೀತಿಗೆ ಅಮೆರಿಕಾ ಟೀಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಕ್ಕಟ್ಟಿನ ಮಧ್ಯೆ ಇಮ್ರಾನ್‌ ರಷ್ಯಾ ಭೇಟಿ; ಪಾಕಿಸ್ತಾನದ ಇಬ್ಬಂದಿ ನೀತಿಗೆ ಅಮೆರಿಕಾ ಟೀಕೆ

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಮಾಸ್ಕೋಗೆ ಭೇಟಿ ನೀಡುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಮೆರಿಕ, ಉಕ್ರೇನ್​ ವಿರುದ್ಧ ರಷ್ಯಾ ಕೈಗೊಂಡಿರುವ ಕಾರ್ಯಾಚರಣೆಗಳಿಗೆ ವಿರೋಧವನ್ನು ವ್ಯಕ್ತಪಡಿಸುವುದು ಪ್ರಯೊಂದು ಜವಾಬ್ದಾರಿಯುತ ದೇಶಗಳ ಕರ್ತವ್ಯವಾಗಿದೆ ಎಂದು ಹೇಳಿದೆ.

ಉಕ್ರೇನ್​ನಲ್ಲಿ ಪ್ರಸ್ತುತ ಇರುವ ಯುದ್ಧ ಪರಿಸ್ಥಿತಿಯ ಕುರಿತಂತೆ ಅಮೆರಿಕವು ಪಾಕಿಸ್ತಾನಕ್ಕೆ ತನ್ನ ನಿಲುವನ್ನು ಈಗಾಗಲೇ ತಿಳಿಸಿದೆ ಎಂದು ಅಮೆರಿಕ ರಾಜ್ಯ ಇಲಾಖೆ ವಕ್ತಾರ ನೆಡ್​ ಪ್ರೈಸ್​ ಹೇಳಿದ್ದಾರೆ.

ಉಕ್ರೇನ್​ನ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಕ್ರಮದ ಕುರಿತಂತೆ ನಮ್ಮ ನಿಲುವು ಏನಿದೆ ಎಂಬುದನ್ನು ಪಾಕ್​ಗೆ ತಿಳಿಸಿದ್ದೇವೆ. ಯುದ್ಧದ ಮೇಲೆ ರಾಜತಾಂತ್ರಿಕತೆಯನ್ನು ಮುಂದುವರಿಸುವ ನಮ್ಮ ಪ್ರಯತ್ನಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಜೊತೆಯಲ್ಲಿ ಮಾಸ್ಕೋದಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ರ ನಿಗದಿತ ಭೇಟಿಯ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ ನೆಡ್​ ಪ್ರೈಸ್​ ಈ ಮಾಹಿತಿಯನ್ನು ನೀಡಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​​ರನ್ನು ಭೇಟಿಯಾಗಲು ಹಾಗೂ ಆರ್ಥಿಕ ಸಹಕಾರ ಸೇರಿದಂತೆ ಹಲವಾರು ವಿಚಾರಗಳ ಜೊತೆ ಚರ್ಚಿಸಲು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ನಿನ್ನೆ ಮಾಸ್ಕೋಗೆ ತೆರಳಿದ್ದಾರೆ. ರಷ್ಯಾ ಹಾಗೂ ಉಕ್ರೇನ್​ ಬಿಕ್ಕಟ್ಟಿನ ಬಳಿಕ ರಷ್ಯಾದ ಅಧ್ಯಕ್ಷರನ್ನು ಭೇಟಿಯಾಗಲು ತೆರಳಿದ ಮೊದಲ ವಿದೇಶಿ ನಾಯಕ ಇಮ್ರಾನ್​ ಖಾನ್​ ಎನಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...