ನಟಿ ಮಂದಿರಾ ಬೇಡಿ ಅವರ ಪತಿ ಇತ್ತೀಚೆಗಷ್ಟೇ ನಿಧನರಾಗಿದ್ದು, ಈ ನೋವಿನಿಂದ ಹೊರಬರುತ್ತಿದ್ದಾರೆ. ಈ ನಡುವೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಿಂದ ಸಖತ್ ಟ್ರೋಲ್‍ಗೆ ಒಳಗಾಗಿದ್ದಾರೆ.
ನಟಿ ಮಂದಿರಾ ತನ್ನ ಸ್ನೇಹಿತನ ಜೊತೆಗಿನ ಪೂಲ್‍ನಲ್ಲಿ ತೆಗೆದಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಈ ಫೋಟೋ ನೆಟ್ಟಿಗರಿಗೆ ಒಂಚೂರು ಇಷ್ಟವಾಗಿಲ್ಲ. ಅವರು ಆಕೆಯನ್ನು ಟ್ರೋಲ್ ಮಾಡಿದ್ದಾರೆ.
ಮಂದಿರಾ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್ ನಲ್ಲಿ ತನ್ನ ಸ್ನೇಹಿತನೊಂದಿಗಿನ ಫೋಟೋ ಹಂಚಿಕೊಳ್ಳುತ್ತಾ, ಹುಟ್ಟುಹಬ್ಬದ ಶುಭಾಶಯಗಳು ಆದಿ. ಈ ಛಾಯಾಚಿತ್ರವು ಎಲ್ಲವನ್ನೂ ಹೇಳುತ್ತದೆ. ತನ್ನ ಪಾಲಿಗೆ ನೀನು ಏನಾಗಿದ್ದಿ……. ತಮ್ಮಿಬ್ಬರ ಸಂಬಂಧ ಎಂತಹುದು ಎಂದು ಈ ಫೋಟೋವೇ ಹೇಳುತ್ತದೆ. 17ನೇ ವಯಸ್ಸಿನಿಂದಲೂ ಆತ್ಮೀಯ ಸ್ನೇಹಿತನಾಗಿರುವ ನಿನ್ನನ್ನು ತಾನು ಬಹಳ ಪ್ರೀತಿ ಮಾಡುತ್ತೇನೆ. ನಿನಗೆ ಒಳ್ಳೆಯದಾಗಲಿ ಅಂತಾ ಬರೆದಿದ್ದಾರೆ.
ಮಂದಿರಾ ಗೆಳೆಯನೊಂದಿಗಿನ ಫೋಟೋ ಹಂಚಿಕೊಂಡ ತಕ್ಷಣ ಅವರ ಪೋಸ್ಟ್ ಗೆ ನೆಟ್ಟಿಗರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪತಿ ತೀರಿ ಹೋಗಿ ಒಂದು ವರ್ಷನೂ ಕಳೆದಿಲ್ಲ. ಆಗಲೇ ಮತ್ತೊಬ್ಬನ ಜೊತೆ ಈ ರೀತಿ ಫೋಟೋ ಹಂಚಿಕೊಳ್ಳುತ್ತೀರಾ..? ಅಂತೆಲ್ಲಾ ನೆಟ್ಟಿಗರು ಹಿಗ್ಗಾಮುಗ್ಗಾ ಝಾಡಿಸಿದ್ದಾರೆ. ತೀರಾ ಕಟುವಾಗಿ ಕಾಮೆಂಟ್ ಗಳು ಬರಲಾರಂಭಿಸಿದ್ರಿಂದ ಕೊನೆಗೆ ಮಂದಿರಾ ತನ್ನ ಪೋಸ್ಟ್‌ನಲ್ಲಿನ ಕಾಮೆಂಟ್‌ಗಳನ್ನು ನಿಷ್ಕ್ರಿಯಗೊಳಿಸಬೇಕಾಯ್ತು.
ಮಂದಿರಾ ಪತಿ ರಾಜ್ ಕೌಶಲ್ ಕಳೆದ ವರ್ಷ ಜೂನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತಿ ತೀರಿಕೊಂಡ ನಂತರ ಮಂದಿರಾ ತಮ್ಮ ಜೀವನದ ವಿವರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಕ್ಕಳೇ ತನಗೆ ಪ್ರೇರಣೆಯ ದೊಡ್ಡ ಮೂಲ ಎಂದು ಮಂದಿರಾ ತಿಳಿಸಿದ್ದಾರೆ.