ಬಾ ಓಡಿ ಹೋಗೋಣ ಎಂದಿದ್ದಕ್ಕೆ ಮದುವೆಯ ದಿನ ಬರುತ್ತೇನೆ ಎಂದ ವಿಶಾಲ್; 10 ರೂ. ನೋಟಿನಲ್ಲಿ ಪ್ರಿಯತಮೆಗೆ ಸಂದೇಶ 25-04-2022 9:49AM IST / No Comments / Posted In: Latest News, India, Live News ಬಾಲಿವುಡ್ ತಾರೆಯರಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವಿವಾಹಕ್ಕಿಂತ 10 ರೂ. ನೋಟಿನಲ್ಲಿ ಬರೆಯಲಾಗಿರುವ ಪ್ರೇಮಕಥೆಯೇ ಈಗ ಇಂಟ್ರೆಸ್ಟಿಂಗ್ ಆಗಿದೆ. ಇದೀಗ ಇಂಟರ್ನೆಟ್ ತುಂಬೆಲ್ಲಾ ವಿಶಾಲ್, ಕುಸುಮ್ ಅವರ ಪ್ರೀತಿಯದ್ದೇ ಸುದ್ದಿ. ಕೆಲವು ದಿನಗಳ ಹಿಂದೆ ಯುವತಿ ಕುಸುಮ್ ತನ್ನ ಪ್ರೇಮಿ ವಿಶಾಲ್‌ಗೆ 10 ರೂಪಾಯಿ ನೋಟಿನಲ್ಲಿ ಬರೆದಿದ್ದ ಸಂದೇಶ ವೈರಲ್ ಆಗಿತ್ತು. ವಿಶಾಲ್, ನನ್ನ ಮದುವೆ ಏಪ್ರಿಲ್ 26ರಂದು ನಿಶ್ಚಯವಾಗಿದೆ. ದಯವಿಟ್ಟು ಓಡಿ ಹೋಗೋಣಾ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿಮ್ಮ ಕುಸುಮ್ ಎಂದು ಬರೆಯಲಾಗಿತ್ತು. ಈ ಸಂದೇಶ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದಲ್ಲದೆ, ವಿಶಾಲ್ ಗೆ ಸಂದೇಶ ತಲುಪಿಸಲು ನೆಟ್ಟಿಗರು ಕೂಡ ಪ್ರಯತ್ನ ಪಟ್ಟಿದ್ದರು. ನೋಟಿನಲ್ಲಿ ಬರೆಯಲಾಗಿದ್ದ ಸಂದೇಶದ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ, ತಮಗೆ ತಿಳಿದಿರುವ ಪ್ರತಿಯೊಬ್ಬ ವಿಶಾಲ್‌ನನ್ನು ಟ್ಯಾಗ್ ಮಾಡಿದ್ದರು. ಇದೀಗ ಏಪ್ರಿಲ್ 26 ಕ್ಕೆ ಕೇವಲ ಒಂದೇ ದಿನ ಬಾಕಿ ಇರುವಂತೆ ಪ್ರೇಮಿ ವಿಶಾಲ್, ಕುಸುಮ್ ಅವರ ಸಂದೇಶವನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಇನ್ನೊಂದು 10 ರೂಪಾಯಿ ನೋಟಿನಲ್ಲಿ ವಿಶಾಲ್ ಸಂದೇಶ ಬರೆದಿದ್ದಾರೆ. ಏಪ್ರಿಲ್ 26ಕ್ಕೆ ಬರುವುದಾಗಿ ಪ್ರೇಮಿ ವಿಶಾಲ್ ಉತ್ತರಿಸಿದ್ದಾರೆ. ವಿಶಾಲ್ ತನ್ನ ಪ್ರಿಯತಮೆಗೆ ಬರೆದಿರೋ ಸಂದೇಶ ಹೀಗಿದೆ…… ಕುಸುಮ್, ನಾನು ನಿಮ್ಮ ಸಂದೇಶವನ್ನು ಸ್ವೀಕರಿಸಿದ್ದೇನೆ. ತಾನು ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನ, ವಿಶಾಲ್ ಎಂದು ಬರೆಯಲಾಗಿದೆ. ಇದೀಗ ಪ್ರೇಮಿ ವಿಶಾಲ್ ಬರೆದಿರೋ ಸಂದೇಶ ಕೂಡ ಇಂಟರ್ನೆಟ್ ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ. Twitter show your power… 26th April ke Pehle kusum ka Yeh message vishal tak pahuchana hai.. Doh pyaar karne wale ko milana hai.. Please amplify n tag all vishal you know.. 😂 pic.twitter.com/NFbJP7DiUK — Crime Master Gogo (PARODY) 🇮🇳 (@vipul2777) April 18, 2022