
ಉದ್ಯಮಿ ಯುಸಾಕು ಮೇಜಾವಾ, ನಿರ್ಮಾಪಕ ಯೊಜೊ ಹಿರಾನೊ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಮಿಸುರ್ಕಿನ್ ಅವರೊಂದಿಗೆ ಕಝಾಕಿಸ್ತಾನ್‌ನ ಸ್ಟೆಪ್ಪೆಸ್‌ನಲ್ಲಿ ಇಳಿದಿದ್ದಾರೆ.
ಲ್ಯಾಂಡಿಂಗ್ ಸೈಟ್‌ನ ದೃಶ್ಯಾವಳಿಗಳ ಪ್ರಕಾರ ಮಧ್ಯ ಕಝಾಕಿಸ್ತಾನ್ ಪಟ್ಟಣದ ಜೆಝ್‌ಕಾಜ್‌ಗನ್‌ನಿಂದ ಆಗ್ನೇಯಕ್ಕೆ 150 ಕಿ.ಮೀಗಳಷ್ಟು ದೂರದಲ್ಲಿ ಇಳಿದಿದ್ದಾರೆ. ಒಂದು ದಶಕದ ದೀರ್ಘ ವಿರಾಮದ ನಂತರ, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ರಷ್ಯಾ ಮತ್ತೆ ಮರಳಿದೆ.
ಮೂವರೂ ಕಕ್ಷೆಯ ಪ್ರಯೋಗಾಲಯದಲ್ಲಿ 12 ದಿನಗಳನ್ನು ಕಳೆದಿದ್ದಾರೆ. ಬಾಹ್ಯಾಕಾಶದಲ್ಲಿ ತಮ್ಮ ದೈನಂದಿನ ದಿನಚರಿ ಹೇಗಿರುತ್ತದೆ ಎಂಬ ಬಗ್ಗೆ ವಿಡಿಯೋ ಚಿತ್ರೀಕರಿಸಿದ ಉದ್ಯಮಿ ಯುಸಾಕು ಮೇಜಾವಾ ಅದನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. 46 ವರ್ಷದ ಬಿಲಿಯನೇರ್, ತನ್ನ ಒಂದು ಮಿಲಿಯನ್ ಅನುಯಾಯಿಗಳಿಗೆ ಹಲ್ಲುಜ್ಜುವುದು ಮತ್ತು ಬಾತ್ರೂಮ್‌ಗೆ ಹೇಗೆ ಹೋಗುವುದು ಎಂಬುದನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ.
ಅಲ್ಲದೆ ಚಹಾವನ್ನು ಕುಡಿಯುವುದು ಮತ್ತು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಮಲಗುವುದು ಹೇಗೆ ಎಂಬುದನ್ನು ಕೂಡ ಅವರು ತೋರಿಸಿದ್ದಾರೆ.