ಬಾಲಿವುಡ್‌ನ ಗುಳಿಕೆನ್ನೆಯ ಸುಂದರಿ ದೀಪಿಕಾ ಪಡುಕೋಣೆ ಮೊನ್ನೆ ಮೊನ್ನೆಯಷ್ಟೆ ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದೌಡಾಯಿಸಿದ್ದು ಅಭಿಮಾನಿಗಳಲ್ಲಿ ಆತಂಕ ಉಂಟುಮಾಡಿತ್ತು. ದಕ್ಷಿಣದ ಸೂಪರ್ ಸ್ಟಾರ್ ಪ್ರಭಾಸ್‌ರ ಪಕ್ಕಾ ಫ್ಯಾನ್ಸ್‌ಗೆ ಅದಕ್ಕಿಂತಲೂ ಬೇಸರದ ಸುದ್ದಿಯೊಂದಿದೆ.
ಫ್ರಭಾಸ್ ರ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ದಿಪೀಕಾ ಪಡುಕೋಣೆಯೇ ನಾಯಕಿ. ಈ ಸಿನೆಮಾ ಶೂಟಿಂಗ್ ಸಂದರ್ಭದಲ್ಲೇ ದೀಪಿಯ ಆರೋಗ್ಯ ಏರುಪೇರಾಗಿತ್ತು. ಸದ್ಯ ಆಕೆ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಚಿತ್ರರಂಗದಲ್ಲಿ ಕೇಳಿ ಬರ್ತಿರೋ ಮತ್ತೊಂದು ಗುಸುಗುಸು ಏನಂದ್ರೆ ದೀಪಿಕಾ, ಚಿತ್ರೀಕರಣ ಸಂದರ್ಭದಲ್ಲಿ ಪ್ರಭಾಸ್‌ಗೆ ಸಾಕಷ್ಟು ಕಾಟ ಕೊಡ್ತಿದ್ದಾಳಂತೆ.
ಇದ್ರಿಂದ ಪ್ರಭಾಸ್ ಬೇಸರಗೊಂಡಿದ್ದು, ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಿವೆ. ಪ್ರಭಾಸ್, ಬಾಹುಬಲಿ ಚಿತ್ರದ ಮೂಲಕ ಇಡೀ ಜಗತ್ತಿನಲ್ಲೇ ಜನಪ್ರಿಯತೆ ಪಡೆದಿರೋ ನಟ. ಹಾಗಾಗಿ ಸಹಜವಾಗಿಯೇ ಪ್ರಭಾಸ್‌ಗೆ ಹಿರೋಯಿನ್ ಆಗಿ ನಟಿಸಲು ‘ಪ್ರಾಜೆಕ್ಟ್ ಕೆ’ ಚಿತ್ರವನ್ನು ದೀಪಿಕಾ ಒಪ್ಪಿಕೊಂಡಿದ್ದರು. ಆದ್ರೆ ಶೂಟಿಂಗ್ ಸೆಟ್‌ನಲ್ಲಿ ದೀಪಿ ಒಂದಿಲ್ಲೊಂದು ನಖರಾ ಮಾಡ್ತಿದ್ದಾರಂತೆ.
ದೀಪಿಕಾಳ ತಂತ್ರಗಳನ್ನು ನೋಡಿ ಬಾಹುಬಲಿ ಪ್ರಭಾಸ್ ಬೇಸರಗೊಂಡಿದ್ದಾರೆ. ಪರಿಣಾಮ ಚಿತ್ರೀಕರಣಕ್ಕೂ ತೊಂದರೆಯಾಗ್ತಿದೆ ಅನ್ನೋ ಮಾಹಿತಿ ಇದೆ. ಬಾಹುಬಲಿ ನಂತರ ಮಾಡಿರೋ ಚಿತ್ರಗಳ ಸಾಲು ಸಾಲು ಸೋಲು ಪ್ರಭಾಸ್‌ಗೆ ಬೇಸರ ಮೂಡಿಸಿದ್ದವು. ಸಾಕಷ್ಟು ಹಣ ಹಾಕಿದ್ದ ‘ಸಾಹೋ’ ಮತ್ತು ‘ರಾಧೇ ಶ್ಯಾಮ್’ ಚಿತ್ರಗಳು ಫ್ಲಾಪ್ ಆಗಿವೆ.
ಹಾಗಾಗಿ ʼಪ್ರಾಜೆಕ್ಟ್ ಕೆʼ ಚೆನ್ನಾಗಿ ಮೂಡಿ ಬರಬೇಕು ಅನ್ನೋ ಹಂಬಲ ಪ್ರಭಾಸ್‌ಗಿದೆ. ಆದ್ರೆ ಸಹನಟಿಯ ಜೊತೆಗೆ ಹೊಂದಾಣಿಕೆಯೇ ಇಲ್ಲದಿರೋದು ಸಿನೆಮಾಕ್ಕೆ ಹಿನ್ನಡೆ ಉಂಟು ಮಾಡ್ತಿದೆ.