alex Certify ‘ಬಾಸ್ಮತಿ’ ಅಕ್ಕಿ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬಾಸ್ಮತಿ’ ಅಕ್ಕಿ ಬಳಸುವವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಬಾಸ್ಮತಿ ಅಕ್ಕಿ ಪ್ರೀಮಿಯಂ ಗುಣಮಟ್ಟದ ಅಕ್ಕಿಯಾಗಿದ್ದು, ಈ ಕಾರಣಕ್ಕಾಗಿಯೇ ಇದು ಬಲು ದುಬಾರಿ. ಅಕ್ಕಿಯ ಇತರ ತಳಿಗಳಿಗಿಂತ ಇದು ವಿಭಿನ್ನವಾಗಿದ್ದು, ಬೇಡಿಕೆಯೂ ಇರುವ ಕಾರಣ ಕಲಬೆರಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಹಿನ್ನೆಲೆಯಲ್ಲಿ ಈಗ ಸರ್ಕಾರ ಬಾಸ್ಮತಿ ಅಕ್ಕಿ ಯಾವ ರೀತಿ ಇರಬೇಕು ಎಂಬುದರ ಕುರಿತು ಗುಣಮಟ್ಟವನ್ನು ನಿಗದಿ ಮಾಡಿದ್ದು, 2023 ರ ಆಗಸ್ಟ್ 1ರಿಂದ ಇದು ಜಾರಿಗೆ ಬರುತ್ತದೆ ಎಂದು ಹೇಳಲಾಗಿದೆ.

ಆಹಾರ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಈ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ ಬ್ರೌನ್ ಬಾಸ್ಮತಿ, ಪಾಲಿಶ್ ಮಾಡಿದ ಬಾಸ್ಮತಿ, ಅರೆ ಬೇಯಿಸಿದ ಬಾಸ್ಮತಿ ಅಕ್ಕಿ ನೈಸರ್ಗಿಕವಾಗಿ ಸುಗಂಧ ಹೊರ ಸೂಸಬೇಕು ಎಂದು ತಿಳಿಸಲಾಗಿದೆ.

ಅಲ್ಲದೆ ಈ ಅಕ್ಕಿ ಕೃತಕವಾದ ಬಣ್ಣ, ಪಾಲಿಶ್ ಹಾಗೂ ಸುಗಂಧದಿಂದ ಮುಕ್ತವಾಗಿರಬೇಕಿದ್ದು, ಬ್ರೌನ್ ಬಾಸ್ಮತಿ 7 ಮಿಲಿ ಮೀಟರ್ ಉದ್ದವಿರಬೇಕಾಗುತ್ತದೆ. ಬೇಯಿಸಿದ ಬಳಿಕ 12 ಮಿಲಿ ಮೀಟರ್ ಉದ್ದವಿರಬೇಕು. ಹಾಗೆಯೇ ಪಾಲಿಶ್ ಮಾಡಿದ ಬಾಸ್ಮತಿ ಅಕ್ಕಿ 6.61 ಮಿಲಿ ಮೀಟರ್ ಉದ್ದ ಇರಬೇಕು. ಬೇಯಿಸಿದ ಬಳಿಕ 12 ಮಿಲಿ ಮೀಟರ್ ಉದ್ದವಾಗಬೇಕು ಎಂದು ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...