ಬಾಳೆಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ತ್ಯಾಜ್ಯವೆಂದು ಕಸದ ಬುಟ್ಟಿಗೆ ಎಸೆಯದಿರಿ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಹೇರಳವಾಗಿದೆ. ಇದರೊಂದಿಗೆ ಮ್ಯಾಗ್ನೀಷಿಯಂ, ಪೊಟ್ಯಾಸಿಯಂ, ನಾರಿನಾಂಶ ಮತ್ತು ಪ್ರೊಟೀನ್ ಸಾಕಷ್ಟಿದೆ. ಅದನ್ನು ಹೇಗೆ ಸೇವಿಸುವುದು ಎಂಬುದನ್ನು ತಿಳಿಯೋಣ ಬನ್ನಿ.
ಬಾಳೆಹಣ್ಣಿನ ಸಿಪ್ಪೆಯನ್ನು ಹಲ್ಲಿನ ಮೇಲೆ ಒಂದು ನಿಮಿಷದ ಕಾಲ ತಿಕ್ಕುವುದರಿಂದ ಹಲ್ಲು ಪಳಪಳನೆ ಹೊಳೆಯುತ್ತದೆ. ತ್ವಚೆಯ ಮೇಲೆ ಮೂಡುವ ಮೊಡವೆ ಇಲ್ಲವೇ ಇತರ ತುರಿಕೆ ಸಂಬಂಧಿ ಕಜ್ಜಿಗಳನ್ನು ಇದು ನಿವಾರಿಸುತ್ತದೆ. ಆಹಾರದಲ್ಲಿ ಪಲ್ಯದ ರೂಪದಲ್ಲಿ ಬಳಸುವುದರಿಂದ ದೇಹಕ್ಕೆ ಪ್ರೊಟೀನ್ ಲಭಿಸುತ್ತದೆ.
ಕಣ್ಣಿನ ಕೆಳಭಾಗ ಕಪ್ಪಾಗಿದ್ದರೆ ಅಲ್ಲಿಗೆ ಬಾಳೆಹಣ್ಣಿನ ಸಿಪ್ಪೆಯ ಒಳಭಾಗದ ಬಿಳಿ ಯನ್ನು ಹಚ್ಚಬೇಕು. ಇದು ಸುಕ್ಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಕಣ್ಣಿಗೆ ಪೊರೆ ಬರದಂತೆ ತಡೆಯುವ ಶಕ್ತಿಯೂ ಇದಕ್ಕಿದೆ. ಹಾಗಾದರೆ ತಡ ಏಕೆ ಇಂದೇ ಮನೆಯಲ್ಲಿ ಬಾಳೆಹಣ್ಣಿನ ಸಿಪ್ಪೆ ಎಸೆಯುವ ಬದಲು ಹೀಗೆ ಬಳಸಿಕೊಳ್ಳಿ.