ಬಾಳೆದಿಂಡಿನ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಕಿಡ್ನಿ ಕಲ್ಲು ನಿವಾರಣೆಗೆ ಇದು ತುಂಬಾ ಒಳ್ಳೆಯದು. ಇದರ ಸಾಂಬಾರು, ಪಲ್ಯ ಮಾಡಿಕೊಂಡು ಸವಿಯುವುದರಿಂದ ಸಾಕಷ್ಟು ಒಳ್ಳೆಯದು.
ಮೊದಲಿಗೆ ಬಾಳೆದಿಂಡಿನ ಮೇಲಿನ ಪದರವನ್ನು ತೆಗೆದು ದಿಂಡನ್ನು ತೆಳ್ಳಗೆ ವೃತ್ತಾಕಾರವಾಗಿ ಕತ್ತರಿಸಿಕೊಳ್ಳಿ. ನಂತರ ಇದನ್ನು ಚಿಕ್ಕ ಚಿಕ್ಕದ್ದಾಗಿ ಹಚ್ಚಿಕೊಳ್ಳಿ . ಗ್ಯಾಸ್ ಮೇಳೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸ್ವಲ್ಪ ಸಾಸಿವೆ, ಉದ್ದಿನಬೇಳೆ, ಕರಿಬೇವು, 4 ಹಸಿಮೆಣಸು ಹಾಕಿ ಫ್ರೈ ಮಾಡಿ. ಆಮೇಲೆ ಕತ್ತರಿಸಿದ ಬಾಳೆದಿಂಡು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ 2 ಕಪ್ ಬಾಳೆ ದಿಂಡಿನ ಪೀಸ್ ಗೆ 1 ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. ನೀರೆಲ್ಲಾ ಆವಿಯಾದ ಮೇಲೆ ಇದಕ್ಕೆ ¼ ಟೀ ಸ್ಪೂನ್ ಸಾಸಿವೆ ಪುಡಿ ಮಿಕ್ಸ್ ಮಾಡಿಕೊಳ್ಳಿ. ನಂತರ ಚಿಟಿಕೆ ಅರಿಶಿನ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಾಳೆದಿಂಡು ಚೆನ್ನಾಗಿ ಬೆಂದಿದೆಯಾ ಎಂದು ಚೆಕ್ ಮಾಡಿಕೊಳ್ಳಿ. ನಂತರ 1 ಚಮಚ ಲಿಂಬೆಹಣ್ಣಿನ ರಸ ಸೇರಿಸಿ ಗ್ಯಾಸ್ ಆಫ್ ಮಾಡಿ. ¼ ಕಪ್ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.