ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ರಜಾ ದಿನಗಳಲ್ಲಿ ಮಕ್ಕಳ ಬಾಯಿ ರುಚಿ ತಣಿಸಲು ಇಲ್ಲಿ ಸುಲಭವಾಗಿ ಮಾಡುವ ಬಾಳೆಹಣ್ಣಿನ ಕಪ್ ಕೇಕ್ ಇದೆ ನೋಡಿ. ಹಣ್ಣುಗಳನ್ನು ಬಳಸಿ ಇದನ್ನು ಮಾಡುವುದರಿಂದ ಮಕ್ಕಳು ಖುಷಿಯಿಂದ ಸವಿಯುತ್ತಾರೆ.
ಬೆಣ್ಣೆ-50 ಗ್ರಾಂ, ½ ಕಪ್-ಸಕ್ಕರೆ, 1-ಮೊಟ್ಟೆ, 2-ಬಾಳೆಹಣ್ಣು, 5-ಸ್ಟ್ರಾಬೆರಿ, ½ ಟೀ ಸ್ಪೂನ್-ವೆನಿಲ್ಲಾ ಎಸೆನ್ಸ್, ¾ ಕಪ್-ಮೈದಾ ಹಿಟ್ಟು, 1 ಟೀ ಸ್ಪೂನ್-ಬೇಕಿಂಗ್ ಪೌಡರ್, ¼ ಟೀ ಸ್ಪೂನ್-ಬೇಕಿಂಗ್ ಸೋಡಾ, ¼ ಸ್ಪೂನ್-ಉಪ್ಪು.
ಒಂದು ಬೌಲ್ ಗೆ ಬೆಣ್ಣೆ ಹಾಗೂ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಮೊಟ್ಟೆ ಒಡೆದು ಹಾಕಿ ಕೊಳ್ಳಿ. ಬಾಳೆ ಹಣ್ಣು, ವೆನಿಲ್ಲಾ ಎಸೆನ್ಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಒಂದು ಬೌಲ್ ಗೆ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದಕ್ಕೆ ಕತ್ತರಿಸಿಟ್ಟುಕೊಂಡ ಸ್ಟ್ರಾಬೆರಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಬೆಣ್ಣೆಯ ಮಿಶ್ರಣವನ್ನು ಸೇರಿಸಿ ಎಲ್ಲಾ ಸರಿಹೊಂದುವಂತೆ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕಪ್ ಕೇಕ್ ಮೌಲ್ಡ್ ಗೆ ಹಾಕಿ ಒವೆನ್ ನಲ್ಲಿ 20 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.