ಕೆಲವೇ ಕೆಲವು ತಿಂಗಳ ಹಿಂದಿನ ಮಾತು, ಬಾಲಿವುಡ್ನ ಪ್ರತಿಷ್ಠಿತ ಅವಾರ್ಡ್ ಶೋ IIFAನಲ್ಲಿ ಬಾಲಿವುಡ್ ನಟ ಸಲ್ಮಾನ್ಖಾನ್ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆ ಕಾರ್ಯಕ್ರಮದಲ್ಲಿ ಅವರು ತಮ್ಮ ಸ್ಟ್ರಗ್ಲಿಂಗ್ ಡೇಗಳನ್ನ ಹೇಳಿಕೊಂಡಿದ್ದರು. ಆ ಸಮಯದಲ್ಲಿ ತಮ್ಮ ಬಳಿ ದುಡ್ಡಿಲ್ಲದಿದ್ದಾಗ ಹೇಗ್ಹೇಗೆ ಪರದಾಡಿದ್ದರು ಅನ್ನೋದನ್ನ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಆ ಸಮಯದಲ್ಲಿ ಗೆಳೆಯ ನಟ ಸುನೀಲ್ ಶೆಟ್ಟಿ ಹೇಗೆ ತಮಗೆ ಸಹಾಯ ಮಾಡಿದ್ದರು ಅನ್ನೋದನ್ನೂ ಹೇಳಿದ್ದಾರೆ.
ತಮ್ಮ ಬಳಿ ಒಂದು ಶರ್ಟ್ ತೆಗೆದುಕೊಳ್ಳೊದಕ್ಕೂ ಆಗ ದುಡ್ಡಿರಲಿಲ್ಲ ಅದೇ ಸಮಯದಲ್ಲಿ ನಟ ಸುನೀಲ್ ಶೆಟ್ಟಿ ತಮಗೆ ದುಬಾರಿ ಶರ್ಟ್ ಒಂದನ್ನ ಉಡುಗೊರೆಯಾಗಿ ಕೊಟ್ಟಿದ್ದನ್ನ ನೆನಪು ಮಾಡಿಕೊಂಡಿದ್ದಾರೆ. ಆ ಕಾರ್ಯಕ್ರಮದ ನಿರೂಪಣೆಯನ್ನ ಮಾಡ್ತಿದ್ದ ನಟ ಮನೀಪ್ಪೋಲ್ ಸಲ್ಮಾನ್ ಬಳಿ ಹೋಗಿ ಜೀವನದ ಯಾವ ಘಳಿಗೆ ನಿಮಗೆ ತುಂಬಾ ಭಾವುಕರನ್ನಾಗಿ ಮಾಡುತ್ತೆ ಅಂದಾಗ, ಸಲ್ಮಾನ್ ಆಗ ತಮ್ಮ ಜೀವನದಲ್ಲಿ ಎದುರಿಸಿರೋವಂತಹ ಈ ಕಷ್ಟದ ದಿನಗಳನ್ನ ನೆನಪು ಮಾಡಿಕೊಳ್ಳುತ್ತಾರೆ.
ಒಂದು ದಿನ ಸುನೀಲ್ ಶೆಟ್ಟಿ ತಮ್ಮ ಅಣ್ಣನ ಅಂಗಡಿಯೊಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಅದು ತುಂಬಾ ದುಬಾರಿಯಾದ ಅಂಗಡಿ. ಆ ಅಂಗಡಿಯಲ್ಲಿರೋ ಜೀನ್ಸ್ ಮತ್ತು ಶರ್ಟ್ ಖರೀದಿಸಲು ನನ್ನ ಬಳಿ ದುಡ್ಡಿರಲಿಲ್ಲ. ಹಾಗಾಗಿ ನಾನು ಅಲ್ಲಿದ್ದ ಕಡಿಮೆ ಬೆಲೆಯ ಜೀನ್ಸ್ ಒಂದನ್ನು ಖರೀದಿಸಿದೆ. ಆಗ ನನ್ನ ಬಳಿ ದುಡ್ಡಿಲ್ಲ ಅನ್ನೋದು ಸುನೀಲ್ಶೆಟ್ಟಿ ಗಮನಿಸಿದ್ದ. ಆಗ ಸುನೀಲ್ ತಾನೇ ಒಂದು ಶರ್ಟ್ ಖರೀದಿಸಿ ನನಗೆ ಶರ್ಟ್ನ್ನ ಉಡುಗೊರೆಯಾಗಿ ಕೊಟ್ಟ. ಈ ಮಾತನ್ನ ಹೇಳುತ್ತಿರುವಾಗಲೇ ಸಲ್ಮಾನ್ ಕಣ್ಣುಗಳು ತೇವವಾಗಿದ್ದವು. ಮಾತುಗಳೇ ಬರದಂತೆ ಗಂಟಲು ತುಂಬಿಕೊಂಡಿತ್ತು.
ಅಲ್ಲೇ ಇದ್ದ ಸುನೀಲ್ ಶೆಟ್ಟಿ ಮಗ ನಟ ಅಹಾನ್ ಅವರನ್ನ ಪ್ರೀತಿಯಿಂದ ತಬ್ಬಿಕೊಂಡರು ಸಲ್ಮಾನ್ಖಾನ್. ಆ ನಂತರ ಮಾತು ಮುಂದುವರಿಸಿದ ಸಲ್ಮಾನ್ “ಅದೇ ಅಂಗಡಿಯಲ್ಲಿದ್ದ ಒಂದು ಪರ್ಸ್ ಮೇಲೆ ನನ್ನ ಕಣ್ಣಿತ್ತು. ಅದನ್ನ ಗಮನಿಸಿದ ಸುನೀಲ್, ನನ್ನನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿ ತಮಗೆ ಅಂತ ಎತ್ತಿಟ್ಟ ವಿಶೇಷ ಪರ್ಸ್ನ್ನ ಕೊಟ್ಟರು.“
ಸಲ್ಮಾನ್ ಹೀಗೆ ಒಂದೊಂದಾಗಿ ತಮ್ಮ ಮನದಾಳದ ಮಾತನ್ನ ಹೇಳ್ತಿರುವಾಗಲೇ, IIFA ಕಾರ್ಯಕ್ರಮ ಚಪ್ಪಾಳೆಯಿಂದ ತುಂಬಿ ಬಿಟ್ಟಿತು. ಕಲರ್ ಚಾನೆಲ್ನ ಈ ವಿಶೇಷ ಕಾರ್ಯಕ್ರಮದ ಪ್ರೋಮೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದ್ದು, ಈಗ ವೈರಲ್ ಆಗಿದೆ. ಸಲ್ಮಾನ್ ಅಭಿಮಾನಿಗಳು ಕೂಡಾ ಸಲ್ಮಾನ್ಖಾನ್ ಮಾತು ಕೇಳಿ ಭಾವುಕರಾಗಿದ್ದಾರೆ. ಅಷ್ಟೇ ಅಲ್ಲ ಕಷ್ಟಕಾಲದಲ್ಲಿ ಸ್ಪಂದಿಸಿದ ಸುನೀಲ್ ಶೆಟ್ಟಿಯವರನ್ನ ಗುಣಗಾನ ಮಾಡಿದ್ದಾರೆ.