ಮುಂಬೈ: ಬಾಲಿವುಡ್ ನಟ ಸೋನು ಸೂದ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೂರಾರು ಜನರಿಗೆ ಸಹಾಯ ಮಾಡಿದ್ದ ಸೋನು ಸೂದ್ ಅವರನ್ನು ಅಭಿಮಾನಿಗಳು ದೇವರಂತೆ ಆರಾಧಿಸುತ್ತಿದ್ದರು. ಈ ನಡುವೆ ಮುಂಬೈನ ಜುಹುವಿನಲ್ಲಿರುವ ಬಹು ಅಂತಸ್ತಿನ ಕಟ್ಟಡವೊಂದನ್ನು ಅನುಮತಿಯಿಲ್ಲದೇ ಹೋಟೆಲ್ ಆಗಿ ಬದಲಿಸಿದ್ದಕ್ಕೆ ಮುಂಬೈ ಮಹಾನಗರ ಪಾಲಿಕೆ ಸೋನು ಸೂದ್ ವಿರುದ್ಧ ದೂರು ದಾಖಲಿಸಿಕೊಂಡಿತ್ತು. ಅಲ್ಲದೇ ತೆರಿಗೆ ವಂಚನೆ ವಿಚಾರಕ್ಕೆ ಸಂಬಂಧಿಸಿದಂತೆ ನಟನ ವಿರುದ್ಧ ಆರೋಪ ಕೇಳಿಬಂದಿದೆ ಎನ್ನಲಾಗಿದೆ.
BIG NEWS: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಸಂತ್ರಸ್ತೆ ಪರ ವಕೀಲೆ ಅನಾರೋಗ್ಯ; ವಿಚಾರಣೆ ಮುಂದೂಡಿಕೆ
ಇದೀಗ ಸೋನು ಸೂದ್ ಗೆ ಸಂಬಂಧಿಸಿದ 6 ಜಾಗಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.