ನಗರದ ಬಿನ್ನಿಪೇಟೆಯಲ್ಲಿರುವ ಇಟಿಎ ಮಾಲ್ ನಲ್ಲಿ ಬಾಲಿವುಡ್ ನಟರ ಭಾವಚಿತ್ರಗಳು ರಾರಾಜಿಸುತ್ತಿದ್ವು. ಕರ್ನಾಟಕದಲ್ಲಿದ್ದುಕೊಂಡು, ಕನ್ನಡ ನಟರ ಒಂದು ಫೋಟೊ ಹಾಕದಿದ್ದಕ್ಕೆ, ಬೇಸರಗೊಂಡ ಕನ್ನಡ ಪರ ಹೋರಾಟಗಾರರು ಸ್ವತಃ ತಾವೇ ಹೋಗಿ ಬಾಲಿವುಡ್ ನಟರ ಭಾವಚಿತ್ರಗಳ ಮೇಲೆ ಕನ್ನಡ ನಟ-ನಟಿಯರ, ಜೊತೆಗೆ ಕವಿಗಳ, ಹೋರಾಟಗಾರರ ಭಾವಚಿತ್ರ ಅಂಟಿಸಿದ್ದಾರೆ.
12 ಗಂಟೆಗಳಲ್ಲಿ ತಡೆರಹಿತವಾಗಿ ಟ್ರೆಡ್ಮಿಲ್ನಲ್ಲಿ 66 ಕಿ.ಮೀ ಓಡಿದ ಮೊರಾದಾಬಾದ್ ಎಕ್ಸ್ಪ್ರೆಸ್..!
ಬಿನ್ನಿಪೇಟೆಯ ಇಟಿಎ ಮಾಲ್ ನಲ್ಲಿರುವ ಸಿನಿಪೊಲೀಸ್ ವಿಭಾಗದಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಹಾಗೂ ಅಮಿತಾಬ್ ರ ದೊಡ್ಡ ಪೋಸ್ಟರ್ ಗಳನ್ನ ಹಾಕಲಾಗಿತ್ತು. ಇಲ್ಲಿ ಒಬ್ಬ ಕನ್ನಡ ನಟರ ಭಾವಚಿತ್ರ ಕೂಡ ಇಲ್ಲ ಎಂದು ಆಕ್ರೋಶಗೊಂಡ ಕನ್ನಡ ಪರ ಹೋರಾಟಗಾರರು, ಮಾಲ್ ಸಿಬ್ಬಂದಿಯೊಂದಿಗೆ ಈ ಬಗ್ಗೆ ಮಾತನಾಡಿದರು.
ನಂತರ ತಾವೇ ತಂದಿದ್ದ ಫೋಟೊಗಳನ್ನ ಬಾಲಿವುಡ್ ನಟರ ಚಿತ್ರಗಳ ಮೇಲೆಯೆ ಅಂಟಿಸಿದರು. ರಾಷ್ಟ್ರಕವಿ ಕುವೆಂಪು, ಸಂಗೊಳ್ಳಿರಾಯಣ್ಣ, ಡಾ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಅನಿಲ್ ಕುಂಬ್ಳೆ, ದ್ರಾವಿಡ್ ಸೇರಿದಂತೆ ಕನ್ನಡದ ಹೆಮ್ಮೆಯ ಸಾಧಕರ ಫೋಟೊಗಳನ್ನ ಮಾಲ್ ಗೋಡೆಗಳ ಮೇಲೆ ಅಂಟಿಸಿ, ಕರ್ನಾಟಕದಲ್ಲಿ ಇರಬೇಕೆಂದರೆ ಕನ್ನಡಕ್ಕೆ ಗೌರವ ಕೊಡಲೆಬೇಕು ಎಂದು ಜೈಕಾರ ಹಾಕಿದ್ದಾರೆ.
https://www.youtube.com/watch?v=EK6bWwYjLBo&feature=youtu.be
https://www.youtube.com/watch?v=sFP_IlwCfEY