ಸಾಮಾನ್ಯವಾಗಿ ಎಲ್ಲರಲ್ಲೂ ಒಂದಿಲ್ಲೊಂದು ಸಣ್ಣ-ಪುಟ್ಟ ದುರಭ್ಯಾಸಗಳಿರುತ್ತವೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ. ನಟ-ನಟಿಯರ ಚಾಳಿ ಎಷ್ಟೊ ಬಾರಿ ಕ್ಯಾಮರಾದಲ್ಲೂ ಸೆರೆಯಾಗಿದೆ.
ಕರೀನಾ ಕಪೂರ್: ಅನೇಕರಿಗೆ ದಿನವಿಡೀ ಉಗುರು ಕಚ್ಚುವ ಚಾಳಿ ಇರುತ್ತದೆ. ಬಾಲಿವುಡ್‌ನ ಬೇಬೋ, ನಟಿ ಕರೀನಾ ಕಪೂರ್‌ಗೆ ಕೂಡ ಈ ದುರಭ್ಯಾಸವಿದೆ. ಉಗುರು ಕಚ್ಚುವ ಅಭ್ಯಾಸವನ್ನು ಬಯಸಿದರೂ ಬಿಡಲು ಸಾಧ್ಯವಾಗುತ್ತಿಲ್ಲ. ಈ ಅಭ್ಯಾಸದಿಂದಾಗಿಯೇ ಕರೀನಾ ನಕಲಿ ಉಗುರುಗಳನ್ನು ಧರಿಸುತ್ತಾರಂತೆ.
ಅಮೀರ್ ಖಾನ್: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಕರೆಸಿಕೊಳ್ಳೋ ಅಮೀರ್ ಖಾನ್‌ಗೂ ವಿಲಕ್ಷಣ ಅಭ್ಯಾಸವಿದೆ. ಅವರ ಮಾಜಿ ಪತ್ನಿ ಕಿರಣ್ ರಾವ್ ಇದನ್ನು ಬಹಿರಂಗಪಡಿಸಿದ್ದಾರೆ. ಅಮೀರ್ ಖಾನ್ ಪ್ರತಿದಿನ ಸ್ನಾನ ಮಾಡಲು ಇಷ್ಟಪಡುವುದಿಲ್ಲವಂತೆ. ಯಾವುದೇ ಶೂಟಿಂಗ್ ಇಲ್ಲದೇ ರಿಲ್ಯಾಕ್ಸ್ ಆಗಿದ್ದಾಗ ಅಮೀರ್ ಸ್ನಾನ ಮಾಡುವುದೇ ಇಲ್ಲ ಅಂತಾ ಕಿರಣ್ ಹೇಳಿದ್ದಾರೆ.
ಸನ್ನಿ ಲಿಯೋನ್ : ಈ ಮಾದಕ ನಟಿಗೆ ಮತ್ತೆ ಮತ್ತೆ ಕೈ ತೊಳೆಯುವ ಅಭ್ಯಾಸವಿದೆ. ಕೈ ತೊಳೆಯುವುದು ಒಳ್ಳೆಯದು ನಿಜ, ಆದರೆ ಐದೈದು ನಿಮಿಷಕ್ಕೂ ಕೈ ತೊಳೆಯುತ್ತಿದ್ದರೆ ಬೇರೆ ಕೆಲಸಗಳಿಗೆ ಅಡ್ಡಿಯಾಗೋದ್ರಲ್ಲಿ ಅನುಮಾನವೇ ಇಲ್ಲ. ಸನ್ನಿ ಪ್ರತಿ 15 ನಿಮಿಷಗಳಿಗೊಮ್ಮೆ ಕೈ ಮತ್ತು ಕಾಲುಗಳನ್ನು ತೊಳೆಯುವ ಅಭ್ಯಾಸವನ್ನು ಹೊಂದಿದ್ದಾಳೆ. ಇದರಿಂದಾಗಿ ಶೂಟಿಂಗ್‌ಗೂ ಕೆಲವೊಮ್ಮೆ ತಡವಾಗಿ ಬರುತ್ತಾಳಂತೆ.
ಶಾರುಖ್ ಖಾನ್: ಕಿಂಗ್ ಖಾನ್ ಅಂತಾನೇ ಕರೆಸಿಕೊಳ್ಳೋ ಶಾರುಖ್‌ಗೂ ಒಂದು ಕೆಟ್ಟ ಅಭ್ಯಾಸವಿದೆ. ಶಾರುಖ್ ಬೂಟುಗಳನ್ನು ಹಾಕಿಕೊಂಡೇ ಮಲಗಿಬಿಡುತ್ತಾರಂತೆ. ಹೊರಗಿನಿಂದ ಬಂದ ಬಳಿಕವೂ ಬೂಟುಗಳನ್ನು ಬಿಚ್ಚಿಡದೇ ಹಾಗೇ ಮಲಗುವುದು ಅವರ ಅಭ್ಯಾಸ.
ಜಾನ್ ಅಬ್ರಹಾಂ: ಜಾನ್ ಅಬ್ರಾಹಂ ಅತ್ಯಂತ ಸೌಜನ್ಯದ ವ್ಯಕ್ತಿ ಅಂತಾನೇ ಹೆಸರಾದವರು. ಇವರಿಗೂ ದುರಭ್ಯಾಸವಿದೆ ಅಂದ್ರೆ ನೀವು ನಂಬಲೇಬೇಕು. ಜಾನ್ ಯಾವುದೇ ಕಾರಣವಿಲ್ಲದೆ ತಮ್ಮ ಪಾದಗಳನ್ನು ಅಲ್ಲಾಡಿಸುತ್ತಾರಂತೆ. ಸುಮ್ಮನೆ ಕುಳಿತಾಗಲೂ ಕಾಲು ಅಲ್ಲಾಡಿಸುವುದು ಇವರ ಚಾಳಿ. ಎಷ್ಟೇ ಪ್ರಯತ್ನಪಟ್ಟರೂ ಇದನ್ನು ಬಿಡಲು ಸಾಧ್ಯವಾಗುತ್ತಿಲ್ಲ.