alex Certify ಬಾಲಿವುಡ್​ ನಟಿ ನೋರಾ ಫತೇಹಿಗೆ ಕೋವಿಡ್​ ಸೋಂಕು: ನಾನು ಹಾಸಿಗೆ ಹಿಡಿದಿದ್ದೇನೆ ಎಂದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ನಟಿ ನೋರಾ ಫತೇಹಿಗೆ ಕೋವಿಡ್​ ಸೋಂಕು: ನಾನು ಹಾಸಿಗೆ ಹಿಡಿದಿದ್ದೇನೆ ಎಂದ ನಟಿ

ಮುಂಬೈನಲ್ಲಿ ಕೋವಿಡ್​ 19 ಪ್ರಕರಣಗಳು ಹೆಚ್ಚುತ್ತಿವೆ. ದಿನದಿಂದ ದಿನಕ್ಕೆ ಸೆಲೆಬ್ರಿಟಿಗಳು ಸಹ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದೀಗ ನೋರಾ ಫತೇಹಿ ಕೂಡ ಕೋವಿಡ್​ 19ಗೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಮಾಹಿತಿಯನ್ನು ನೋರಾ ಫತೇಹಿ ಹಂಚಿಕೊಂಡಿದ್ದಾರೆ. ಡಿಸೆಂಬರ್​ 28ರಂದು ತಮ್ಮ ಕೋವಿಡ್ ವರದಿ ಪಾಸಿಟಿವ್​ ಬಂದಿದ್ದು ಐಸೋಲೇಟ್​ ಆಗಿದ್ದೇನೆ ಎಂದು ಹೇಳಿದ್ದಾರೆ.

ಈ ಸಂಬಂಧ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ನಟಿ ನೋರಾ ಫತೇಹಿ, ದುರಾದೃಷ್ಟವಶಾತ್​ ನಾನು ಕೋವಿಡ್​ ವಿರುದ್ಧ ಹೋರಾಡುತ್ತಿದ್ದೇನೆ. ಇದು ನನಗೆ ಅತೀವವಾದ ಕಷ್ಟವನ್ನು ನೀಡುತ್ತಿದೆ. ನಾನು ಅನೇಕ ದಿನಗಳ ಕಾಲ ಹಾಸಿಗೆ ಹಿಡಿದಿದ್ದೆ. ಇದೀಗ ವೈದ್ಯರ ನಿಗಾದಲ್ಲಿದ್ದೇನೆ. ದಯಮಾಡಿ ಎಲ್ಲರೂ ಸುರಕ್ಷಿತರಾಗಿರಿ, ಮಾಸ್ಕ್​ ಧರಿಸಿ. ಕೋವಿಡ್​ ಅತ್ಯಂತ ವೇಗವಾಗಿ ಹರಡುತ್ತಿದೆ. ಅಲ್ಲದೇ ಇದು ಪ್ರತಿಯೊಬ್ಬರನ್ನೂ ಬೇರೆ ರೀತಿಯಲ್ಲಿ ಅಟ್ಯಾಕ್​ ಮಾಡುತ್ತಿದೆ. ನನಗೆ ಅತೀವವಾಗಿ ತೊಂದರೆಯಾಗಿದೆ. ಇದು ಯಾರಿಗೆ ಬೇಕಾದರೂ ಆಗಬಹುದು. ಹಾಗಾಗಿ ಸುರಕ್ಷಿತರಾಗಿರಿ..! ಇದರಿಂದ ಗುಣಮುಖಳಾಗಲು ನಾನು ಪ್ರಯತ್ನ ಮುಂದುವರಿಸಿದ್ದೇನೆ. ನಿಮ್ಮ ಆರೋಗ್ಯಕ್ಕಿಂತ ಮುಖ್ಯವಾದದ್ದು ಏನೂ ಇಲ್ಲ. ಕಾಳಜಿ ವಹಿಸಿ. ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿಗೆ ಬಾಲಿವುಡ್​ನ ಅನೇಕ ತಾರೆಯರು ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಕರೀನಾ ಕಪೂರ್, ಅರ್ಜುನ್​ ಕಪೂರ್​, ಅವರ ಸಹೋದರಿ ಅಂಶುಲಾ ಕಪೂರ್​ ಸೇರಿದಂತೆ ಅನೇಕರು ಕೋವಿಡ್​ ಸೋಂಕಿಗೆ ಒಳಗಾಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...