alex Certify ಬಾಲಕಿಯ ಸ್ತನ ಬೆಳವಣಿಗೆಯಾಗದೇ ಇದ್ದರೂ ಅದನ್ನು ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯಕ್ಕೆ ಸಮವೆಂದ ಹೈಕೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿಯ ಸ್ತನ ಬೆಳವಣಿಗೆಯಾಗದೇ ಇದ್ದರೂ ಅದನ್ನು ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯಕ್ಕೆ ಸಮವೆಂದ ಹೈಕೋರ್ಟ್

ಬಾಲಕಿಯ ಸ್ತನಗಳು ಪ್ರೌಡಾವಸ್ಥೆ ತಲುಪದಿದ್ದರೂ ಸಹ ಆರೋಪಿಯು ನಿರ್ದಿಷ್ಟ ಲೈಂಗಿಕ ಉದ್ದೇಶವನ್ನೇ ಇಟ್ಟುಕೊಂಡು ಆಕೆಯ ಎದೆಯನ್ನು ಸ್ಪರ್ಶಿಸಿದರೆ ಅದು ಲೈಂಗಿಕ ದೌರ್ಜನ್ಯವೆಂದೇ ಪರಿಗಣಿಸಲಾಗುತ್ತದೆ ಎಂದು ಕೊಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. 2017ರಲ್ಲಿ ಮಹಿಳೆಯೊಬ್ಬರು ತಮ್ಮ 13 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

ಯಾರೂ ಇಲ್ಲದ ವೇಳೆಯಲ್ಲಿ ಬಾಲಕಿಯ ಮನೆಗೆ ನುಗ್ಗಿದ ಆರೋಪಿಯು ಅಪ್ರಾಪ್ತೆಯ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿ ಆಕೆಗೆ ಮುತ್ತಿಕ್ಕಿದ್ದ ಎಂದು ಆರೋಪಿಸಲಾಗಿದೆ. ವೈದ್ಯಕೀಯ ಪರೀಕ್ಷೆಯ ವೇಳೆಯಲ್ಲಿ ಸಂತ್ರಸ್ತೆಯ ಸ್ತನಗಳು ರೂಪುಗೊಂಡಿಲ್ಲ ಎಂದು ಸಾಕ್ಷ್ಯ ನೀಡಲಾಗಿತ್ತು. ನ್ಯಾಯಮೂರ್ತಿ ಬಿವೇಕ್​ ಚೌಧರಿ ಈ ಪ್ರಕರಣದಲ್ಲಿ 13 ವರ್ಷದ ಬಾಲಕಿಯ ಸ್ತನ ಪ್ರೌಡಾವಸ್ತೆ ತಲುಪಿದೆಯೇ ಅಥವಾ ಇಲ್ಲವೇ ಎಂಬುದು ಸಂಪೂರ್ಣ ಅಪ್ರಸ್ತುತವಾಗಿದೆ ಎಂದು ಹೇಳಿದರು.

13 ವರ್ಷ ವಯಸ್ಸಿನ ಹುಡುಗಿಯ ದೇಹದ ನಿರ್ದಿಷ್ಟ ಭಾಗವನ್ನು ಪೋಕ್ಸೊ ಕಾಯ್ದೆಯ ಸೆಕ್ಷನ್ 7 ರ ಉದ್ದೇಶಕ್ಕಾಗಿ ಸ್ತನ ಎಂದು ಕರೆಯಲಾಗುತ್ತದೆ, ಕೆಲವು ವೈದ್ಯಕೀಯ ಕಾರಣಗಳಿಂದಾಗಿ ಆಕೆಯ ಸ್ತನಗಳು ಬೆಳವಣಿಗೆಯಾಗದಿದ್ದರೂ ಸಹ. ಮಗುವಿನ ಯೋನಿ, ಶಿಶ್ನ, ಗುದದ್ವಾರ ಅಥವಾ ಸ್ತನಗಳನ್ನು ಸ್ಪರ್ಶಿಸುವುದು ಅಥವಾ ಲೈಂಗಿಕ ಉದ್ದೇಶದಿಂದ ಆರೋಪಿಯಂತೆಯೇ ಅವರನ್ನು ಮುಟ್ಟುವಂತೆ ಮಾಡುವುದು ಲೈಂಗಿಕ ದೌರ್ಜನ್ಯದ ಅಪರಾಧವಾಗಿದೆ ದೈಹಿಕ ಸಂಪರ್ಕವನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.

ಐಪಿಸಿ ಸೆಕ್ಷನ್ 448. IPC ಯ ಸೆಕ್ಷನ್ 448/354 ಮತ್ತು POCSO ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಕೋರ್ಟ್ ಘೋಷಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...