ತಮಿಳುನಾಡು: ಬಾಲಕಿಯರ ಪ್ರೌಢಶಾಲಾ ಶೌಚಾಲಯದಲ್ಲಿ ನವ ಜಾತ ಗುಂಡು ಮಗು ಪತ್ತೆಯಾಗಿದೆ. ತಮಿಳುನಾಡಿನ ತಿರುವೆರುಪುರ್ನ ಕತ್ತೂ ನಲ್ಲಿರುವ ಅದಿತ್ ದ್ರಾವಿಡರ ಕಲ್ಯಾಣ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಜಾಗದಲ್ಲಿ ಮಗು ಹೇಗೆ ಬಂತು ಯಾರಾದರೂ ತಂದು ಇಲ್ಲಿ ಹಾಕಿ ಹೋಗಿದ್ದಾರೋ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಹೌದು, ಈ ಮಗು ಜನಿಸಿ ಒಂದು ಗಂಟೆಯಾಗಿರಬೇಕು ಎಂದು ಊಹಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ಈ ಮಗುವಿನ ಮೃತದೇಹವನ್ನು ಮಹಾತ್ಮ ಗಾಂಧಿ ಮೆಮೋರಿಯಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಮೃತದೇಹದ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಹಶೀಲ್ದಾರ್ ಚಂದ್ರದವನತ್ತನ್ ಮತ್ತು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ.
ಇನ್ನು ಅನೇಕ ಆಯಾಮಗಳಲ್ಲಿ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಇಲ್ಲಿನ ವಿದ್ಯಾರ್ಥಿನಿಯ ಮಗು ಇರಬಹುದು ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಸದ್ಯ ಈ ಶಾಲೆಗೆ ಟೈಟ್ ಸೆಕ್ಯುರಿಟಿ ನೀಡಲಾಗಿದೆ. ಈ ರೀತಿಯ ಪ್ರಕರಣ ಶಾಲಾ ಆವರಣದಲ್ಲಿ ಮತ್ತೆ ನಡೆಯದಂತೆ ಎಚ್ಚರ ವಹಿಸಿದ್ದು, ಸೆಕ್ಯೂರಿಟಿ ಗಾರ್ಡ್ ಹಾಕಲಾಗಿದೆ. ಇನ್ನು ಆವರಣದ ಸುತ್ತಮುತ್ತಲು ಪರಿಶೀಲನೆಗೆ ಕ್ಯಾಮರಾ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.