ಅಂತರ್ಜಾಲದಲ್ಲಿ ಪ್ರತಿಭಾನ್ವಿತರ ವಿಡಿಯೋಗಳಿಗೆ ಯಾವುದೇ ಕೊರತೆಯಿಲ್ಲ. ಇದೀಗ ಚಿಕ್ಕ ಬಾಲಕನೊಬ್ಬ ಗಣೇಶನ ಶಿಲ್ಪವನ್ನು ಮಾಡುವ ಈ ವಿಡಿಯೋ ವೈರಲ್ ಆಗಿದೆ. ಇದನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರೂ ಮೆಚ್ಚಿದ್ದಾರೆ.
ಮಹೀಂದ್ರಾ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬಾಲಕನೊಬ್ಬ ಗಣೇಶನ ಪರಿಪೂರ್ಣ ಮೂರ್ತಿಯನ್ನು ಕೆತ್ತಿಸುತ್ತಿರುವುದನ್ನು ನೋಡಬಹುದು. ಗಣಪತಿಯ ಸೊಂಡಿಲನ್ನು ಬಹಳ ಎಚ್ಚರಿಕೆಯಿಂದ ಮಾಡಿ, ಅದಕ್ಕೆ ಆಕಾರ ನೀಡುತ್ತಾನೆ. ಆತನ ಕಲೆಯ ನೈಪುಣ್ಯತೆಯನ್ನು ನೋಡಿದ್ರೆ ವೃತ್ತಿಪರ ಕಲಾವಿದರು ಶಿಲ್ಪವನ್ನು ರೂಪಿಸುತ್ತಿರುವಂತೆ ತೋರುತ್ತಿತ್ತು.
ಈ ವಿಡಿಯೋವನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಪಡೆದಿದೆ. ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಮಹೀಂದ್ರಾ ಅವರ ಪೋಸ್ಟ್‌ನಿಂದ ಪ್ರಭಾವಿತರಾಗಲಿಲ್ಲ. ಮಹೀಂದ್ರಾ ಅವರಂತಹವರು ಬಾಲಕ ಮೂರ್ತಿಯನ್ನು ತಯಾರಿಸುತ್ತಿರುವುದನ್ನು ಹೊಗಳುವುದು ಬಾಲಕಾರ್ಮಿಕತೆಯನ್ನು ಉತ್ತೇಜಿಸುತ್ತಿರುವಂತೆ ತೋರುತ್ತಿದೆ ಎಂದು ಹಲವರು ಹೇಳಿದ್ದಾರೆ. ಆದಾಗ್ಯೂ, ಬಾಲಕನಿಗೆ ಅಪಾರ ಪ್ರತಿಭೆ ಇದೆ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.