ಗರ್ಭಿಣಿಯೊಬ್ಬಳು, ಬಾಯ್ ಫ್ರೆಂಡ್ ಜೊತೆ ಸೇರಿ ತನ್ನ ತಾಯಿ ಹತ್ಯೆ ಮಾಡಿದ್ದಾಳೆ. ಈಗ ಆರೋಪಿ ಯುವತಿಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲಾಗಿದೆ. ಜೈಲಿನಿಂದ ಬಿಡುಗಡೆಯಾದ ನಂತರ ಇಂಡೋನೇಷ್ಯಾ ಸರ್ಕಾರ ಯುವತಿಯನ್ನು ವಾಪಸ್ ಕಳುಹಿಸಿದೆ. ತಾಯಿ ಹತ್ಯೆ ಮಾಡಿ, ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಡಲು ಯತ್ನಿಸಿದ್ದಳು. ಆದ್ರೆ ಅದು ಸಾಧ್ಯವಾಗಿರಲಿಲ್ಲ. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.
ಇಂಡೋನೇಷ್ಯಾದ ಬಾಲಿಯಲ್ಲಿರುವ ಐಷಾರಾಮಿ ಹೋಟೆಲ್‌ನಲ್ಲಿ ಘಟನೆ ನಡೆದಿತ್ತು. ಹೀದರ್ ಮ್ಯಾಕ್ ತಾಯಿ ಹತ್ಯೆ ಮಾಡಿದ್ದ ಯುವತಿ. ತಾಯಿ-ಮಗಳ ಮಧ್ಯೆ ಜಗಳ ನಡೆದಿತ್ತು. ಇದ್ರಿಂದ ಕೋಪಗೊಂಡ ಯುವತಿ, ತಾಯಿ ತಲೆಗೆ ಟ್ರೇ ನಲ್ಲಿ ಹೊಡೆದು ಹತ್ಯೆ ಮಾಡಿದ್ದಳು. ತಲೆಗೆ ತೀವ್ರ ಪೆಟ್ಟಾಗಿ, ತಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.ಅಲ್ಲೇ ಇದ್ದ ಬಾಯ್ ಪ್ರೆಂಡ್ ಮತ್ತು ಹೀದರ್ ಸೇರಿ, ಶವವನ್ನು ಸೂಟ್ ಕೇಸ್ ನಲ್ಲಿ ತುಂಬಿ, ಹೊಟೇಲ್ ಹೊರಗಿಟ್ಟಿದ್ದರು.
ತಾಯಿ ಮಗಳ ಜಗಳಕ್ಕೆ ಮಗಳ ಪ್ರಿಯಕರನೇ ಕಾರಣನಾಗಿದ್ದನಂತೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಹೀದರ್ ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಹೀದರ್ ಮ್ಯಾಕ್ ಜೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಳು. ಇದೀಗ ಇಬ್ಬರನ್ನೂ ಅಮೆರಿಕಕ್ಕೆ ವಾಪಸ್ ಕಳುಹಿಸಲಾಗಿದೆ. ನ್ಯಾಯಾಲಯವು ಕೊಲೆಗಾರ ಮಗಳಿಗೆ 10 ವರ್ಷ ಮತ್ತು ಆಕೆಯ ಪ್ರಿಯಕರನಿಗೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಹೀದರ್ ಜೈಲಿನಲ್ಲಿ ಉತ್ತಮವಾಗಿ ನಡೆದುಕೊಂಡಿದ್ದರಿಂದ ಆಕೆಯನ್ನು ಬಿಡಲಾಗಿದೆ.