ಬಾಲಿವುಡ್ ನಟಿ ರಾಖಿ ಸಾವಂತ್ ಇತ್ತೀಚೆಗಷ್ಟೇ ತನ್ನ ಗೆಳೆಯ ಆದಿಲ್ ಖಾನ್ ಬಗ್ಗೆ ತನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದರು. ಗೆಳೆಯ ಆದಿಲ್ ತನಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾಗಿ ಬಹಿರಂಗಪಡಿಸಿದ್ದರು. ಇದೀಗ, ರಾಖಿ ಆದಿಲ್ ಜೊತೆಗೆ ದುಬೈಗೆ ಹಾರಿದ್ದಾರೆ.
ಹೌದು ರಾಖಿ ಮತ್ತು ಆದಿಲ್ ತಮ್ಮ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಎಂದನಿಸುತ್ತದೆ. ಇದೀಗ ಆದಿಲ್ ಕುಟುಂಬವನ್ನು ಭೇಟಿಯಾಗಲು ರಾಖಿ ದುಬೈಗೆ ತೆರಳಿದ್ದಾರೆ. ಹಾಗಂತ ಆದಿಲ್ ಅವರ ಕುಟುಂಬವು ತಮ್ಮ ಸಂಬಂಧದ ಪರವಾಗಿಲ್ಲ ಎಂದು ರಾಖಿ ಈಗಾಗಲೇ ತಿಳಿಸಿದ್ದರು. ಆದಿಲ್ ಕುಟುಂಬಕ್ಕೆ ರಾಖಿ ಧರಿಸುವ ಉಡುಪು ಇಷ್ಟವಾಗುವುದಿಲ್ಲ ಎಂದು ಅವರು ಬಹಿರಂಗವಾಗಿಯೇ ತಿಳಿಸಿದ್ದರು.
ಆದಿಲ್ ತನ್ನ ಹೆಸರಿನಲ್ಲಿ ದುಬೈನಲ್ಲಿ ಮನೆ ಖರೀದಿಸಿದ್ದಾನೆ. ಹಾಗೆಯೇ ಐಷಾರಾಮಿ ಕಾರನ್ನು ಸಹ ಉಡುಗೊರೆಯಾಗಿ ನೀಡಿದ್ದರು. ಆದರೆ, ತನಗೆ ಆತನ ಪ್ರೀತಿಯೇ ಸಂಪತ್ತು ಎಂದು ರಾಖಿ ತಿಳಿಸಿದ್ದಾರೆ. ತಮ್ಮಿಬ್ಬರ ಸಂಬಂಧದ ಬಗ್ಗೆ ಆದಿಲ್ ತುಂಬಾ ಗಂಭೀರವಾಗಿದ್ದಾನೆ. ಇಲ್ಲದಿದ್ದರೆ ಯಾವ ವ್ಯಕ್ತಿ ತನ್ನ ಪ್ರೀತಿಯನ್ನು ಕುಟುಂಬಕ್ಕೆ ಇಷ್ಟು ಬೇಗ ಪರಿಚಯಿಸುತ್ತಾನೆ ಹೇಳಿ? ಎಂದು ರಾಖಿ ಸಾವಂತ್ ಹೇಳಿದ್ದಾರೆ.
ತಮ್ಮಿಬ್ಬರ ಈ ಪ್ರೇಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಇದೊಂದು ಸಣ್ಣ ಆರಂಭ ಎಂದು ಆದಿಲ್ ತಿಳಿಸಿದ್ದಾರೆ. ರಾಖಿಯಲ್ಲಿ ನೀವು ಏನು ಬದಲಾಯಿಸಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಆದಿಲ್, ಆಕೆ ಕಡಿಮೆ ಗ್ಲಾಮರಸ್ ಮತ್ತು ಹೆಚ್ಚು ಕವರ್ ಆಗಿರುವ ಉಡುಪುಗಳನ್ನು ಧರಿಸಬೇಕು ಎಂದು ತಾನು ಭಾವಿಸುವುದಾಗಿ ಆದಿಲ್ ತಿಳಿಸಿದ್ದಾರೆ.
ಆದಿಲ್ ಮೈಸೂರು ಮೂಲದವರಾಗಿದ್ದು, ರಾಖಿಗಿಂತ ಆರು ವರ್ಷ ಚಿಕ್ಕವರು.