ವಾಟ್ಸಾಪ್ ಮೆಸೇಜಿಂಗ್ ಮಾಡುವ ವೇಳೆ ನಿಮ್ಮ ಸಮಾನ ವಯಸ್ಕ ಸ್ನೇಹಿತರಿಗೆಂದು ಕಳುಹಿಸಬೇಕಾದ ಸಂದೇಶಗಳನ್ನು ಹಿರಿಯರಿಗೂ, ಶಿಕ್ಷಕರಿಗೋ ಕಳುಹಿಸಿ ಭಾರೀ ಮುಜುಗರದ ಪ್ರಸಂಗ ಎದುರಿಸಬೇಕಾದ ಪರಿಸ್ಥಿತಿಯನ್ನು ನೀವೆಂದಾದರೂ ಅನುಭವಿಸಿದ್ದೀರಾ…?
ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸಬೇಕಿದ್ದ ಚಿತ್ರವೊಂದನ್ನು ಅಕಸ್ಮಾತ್ ಆಗಿ ತನ್ನ ಪ್ರಾಧ್ಯಾಪಕರಿಗೆ ಕಳುಹಿಸಿ ಇರುಸುಮುರುಸಿನ ಸನ್ನಿವೇಶ ಎದುರಿಸಿದ ಘಟನೆಯೊಂದನ್ನು ರೆಡ್ಡಿಟ್ ಬಳಕೆದಾರರೊಬ್ಬರು ಶೇರ್ ಮಾಡಿಕೊಂಡಿದ್ದಾರೆ.
ತನ್ನ ಬಾಯ್‌ಫ್ರೆಂಡ್ ಹಾಗೂ ಪ್ರಾಧ್ಯಾಪಕರ ಮೊದಲ ಹೆಸರುಗಳು ಒಂದೇ ಆಗಿರುವ ಕಾರಣ ಆಕೆಯ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಒಂದರ ಕೆಳಗೆ ಒಂದು ಹೆಸರಿವೆ. ಈ ಕಾರಣದಿಂದ ಹೀಗೆ ಅಚಾನಕ್ ಆಗಿ ಮೇಲಿನ ಘಟನೆ ನಡೆದುಹೋಗಿದೆ ಎಂದು ಈ ವಿದ್ಯಾರ್ಥಿನಿ ಹೇಳಿಕೊಂಡಿದ್ದಾರೆ.
ಪುಸ್ತಕದ ಸ್ಟೋರ್ ಒಂದರ ’ರೊಮ್ಯಾಂಟಿಕ್ ವಿಭಾಗದಲ್ಲಿ’ ಕಂಡು ಬಂದ ಪುಸ್ತಕವೊಂದರ ಮೇಲಿದ್ದ ಚಿತ್ರವೊಂದರ ಫೋಟೋ ತೆಗೆದುಕೊಂಡು ವಾಟ್ಸಾಪ್‌ನಲ್ಲಿ ತನ್ನ ಬಾಯ್‌ಫ್ರೆಂಡ್‌ಗೆ ಕಳುಹಿಸಲು ಹೋಗಿ ತಾನು ಓದುತ್ತಿರುವ ವಿವಿಯ ಪ್ರೊಫೆಸರ್‌ರ ಸಂಖ್ಯೆಗೆ ಹೀಗೆ ತಪ್ಪಾಗಿ ಕಳುಹಿಸಿದ್ದಾಳೆ ಈ ವಿದ್ಯಾರ್ಥಿನಿ.
ಏನಾಗಿದೆ ಎಂದು ಅರಿವಾಗುಷ್ಟರಲ್ಲಿ ತನ್ನ ಪ್ರೊಫೆಸರ್ ಆ ಚಿತ್ರವನ್ನು ನೋಡಿದ್ದ ಕಾರಣ, ವಾಟ್ಸಾಪ್‌ನಲ್ಲಿ ಡಬಲ್ ಬ್ಲೂಟಿಕ್ ಕಂಡುಬಂದಿದೆ. ಹೀಗಾಗಿ ಅವರು ನೋಡುವ ಮುನ್ನ ಚಿತ್ರವನ್ನು ಡಿಲೀಟ್ ಮಾಡಲೂ ಸಹ ಈಕೆಗೆ ಸಾಧ್ಯವಾಗಿಲ್ಲ.