
ಪ್ರೇಮಿಗಳು ಅಥವಾ ದಂಪತಿಗಳಲ್ಲಿ ಸಾಮಾನ್ಯವಾಗಿ ಮಹಿಳೆಯರ ಎತ್ತರ ಕಡಿಮೆ ಇರುತ್ತದೆ. ಅಂತಹ ಜೋಡಿಗಳ ಸಂಖ್ಯೆಯೇ ಹೆಚ್ಚು. ಆದರೆ ಇಂಗ್ಲೆಂಡ್‌ನಲ್ಲೊಂದು ವಿಶಿಷ್ಟ ಜೋಡಿಯಿದೆ. ಯುವತಿ ತನ್ನ ಬಾಯ್‌ಫ್ರೆಂಡ್‌ಗಿಂತಲೂ ಸಾಕಷ್ಟು ಎತ್ತರವಾಗಿದ್ದಾಳೆ. ಈಕೆಯ ಹೆಸರು ಲಿಜ್ಜಿ ಜೇಡ್ ಗ್ರೂಮ್‌ಬ್ರಿಡ್ಜ್. ಈಕೆಯ ಎತ್ತರ 6 ಅಡಿ 3 ಇಂಚು. ಅತಿಯಾದ ಎತ್ತರದಿಂದಾಗಿಯೇ ಆಕೆಗೆ ಇದುವರೆಗೂ ಬಾಯ್‌ಫ್ರೆಂಡ್ ಸಿಕ್ಕಿರಲಿಲ್ಲ.
ಕೊನೆಗೂ ಆಕೆಗೆ ಗೆಳೆಯನೊಬ್ಬ ಸಿಕ್ಕಿದ್ದಾನೆ. ಇಂಗ್ಲೆಂಡ್‌ನ ಕಾರ್ನ್‌ವಾಲ್‌ನ 29 ವರ್ಷದ ಜೇಮ್ಸ್, ಲಿಜ್ಜಿಯ ಪ್ರೀತಿಯಲ್ಲಿ ಬಿದ್ದಿದ್ದಾನೆ. 30 ವರ್ಷದ ಈ ಯುವಕನ ಎತ್ತರ 5 ಅಡಿ 8 ಇಂಚು. ಗೆಳತಿಗಿಂತಲೂ ತಾನು ಕುಳ್ಳಗಿದ್ದೇನೆಂದು ಜೇಮ್ಸ್ ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ಆತನಿಗೆ ಯಾವುದೇ ಅಭ್ಯಂತರವಿಲ್ಲವಂತೆ. ಶಾಲಾ ದಿನಗಳಿಂದಲೂ ಲಿಜ್ಜಿ ತನ್ನೆಲ್ಲಾ ಸಹಪಾಠಿಗಳಿಗಿಂತ ಎತ್ತರವಾಗಿದ್ದಳು. 15 ನೇ ವಯಸ್ಸಿನಲ್ಲಿಯೇ ಆಕೆ 6 ಅಡಿ ಎತ್ತರವಾಗಿದ್ದಳು.
ಸದ್ಯ ಈ ಡಿಫರೆಂಟ್ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಗೆ ಗೆಳೆಯ ಸಿಕ್ಕಿದ್ದಕ್ಕೆ ಎಲ್ಲರೂ ಅಭಿನಂದಿಸುತ್ತಿದ್ದಾರಂತೆ. ಅತಿಯಾದ ಎತ್ತರವಿದ್ದಾಳೆ ಎಂಬ ಕಾರಣಕ್ಕೆ ಬರುತ್ತಿದ್ದ ಟೀಕೆ, ಟಿಪ್ಪಣಿಗಳನ್ನೆಲ್ಲ ಯುವತಿ ಸಕಾರಾತ್ಮಕವಾಗಿ ಪರಿಗಣಿಸುತ್ತಿದ್ದಾಳಂತೆ. ಹಾಗಾಗಿ ತನ್ನಲ್ಲಿ ಆತ್ಮವಿಶ್ವಾಸ ದುಪ್ಪಟ್ಟಾಗಿದೆ ಎಂದಾಕೆ ಹೇಳಿಕೊಂಡಿದ್ದಾಳೆ.