ಕೆಲವರಿಗೆ ಬಾಯಿಯಿಂದ ದುರ್ವಾಸನೆ ಹೊರ ಹೊಮ್ಮುತ್ತಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು ಆದರೆ ನಮ್ಮ ಸಮೀಪ ಬರುವ ಇನ್ನೊಬ್ಬ ವ್ಯಕ್ತಿಗೆ ಇದು ಅಸಹ್ಯ ಎನಿಸಬಹುದು. ಹಾಗಾಗಿ ನಮ್ಮ ಉಸಿರನ್ನು ತಾಜಾವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ನೀವು ಸೇವಿಸುವ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಉಪ್ಪಿನಕಾಯಿ, ಮಸಾಲೆ ಹೆಚ್ಚಿದ್ದರೆ ಮರುದಿನ ನಿಮ್ಮ ಉಸಿರು ಕೆಟ್ಟ ವಾಸನೆಯಿಂದ ಕೂಡಿರಬಹುದು ಇದರ ನಿವಾರಣೆಗೆ ಹೀಗೆ ಮಾಡಿ.
ಮಸಾಲೆ ವಸ್ತುಗಳನ್ನು ದಿನವಿಡೀ ತಿನ್ನಬೇಡಿ. ಗ್ರೀನ್ ಟೀ ಕುಡಿಯಿರಿ. ಇದು ಕೆಟ್ಟ ವಾಸನೆಯ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.
ಹೊರಗಿನವರೊಂದಿಗೆ ಸಂಪರ್ಕಕ್ಕೆ ಬರುವ ಮುನ್ನ ತುಳಸಿ ಹಾಗೂ ಪುದಿನಾ ಎಲೆಯನ್ನು ಜಗಿಯಿರಿ. ಇದರಿಂದ ಬಾಯಿಯ ವಾಸನೆಯನ್ನು ತಪ್ಪಿಸಬಹುದು.
ಮೌತ್ ವಾಶ್ ಬಳಸಿ. ದಿನಕ್ಕೆರಡು ಬಾರಿ ಬ್ರಶ್ ಮಾಡಿ. ಊಟದ ಬಳಿಕ ಮೂವತ್ತು ಸೆಕೆಂಡ್ ಕಾಲ ಬಾಯಿ ಮುಕ್ಕಳಿಸಿ. ಸೇಬು ಕ್ಯಾರೆಟ್ ಮೊದಲಾದ ವಸ್ತುಗಳನ್ನು ಹಲ್ಲಿನ ಸಹಾಯದಿಂದಲೇ ಜಗಿದು ತಿನ್ನಿ. ಇವುಗಳಿಂದಲೂ ಬಾಯಿಯ ವಾಸನೆ ಕಡಿಮೆಯಾಗುತ್ತದೆ.
ಪದೇ ಪದೇ ನೀರು ಕುಡಿಯಿರಿ. ಮಲಗಿ ಎದ್ದಾಕ್ಷಣ ಮರೆಯದೆ ಬಾಯಿ ತೊಳೆಯಿರಿ.