ಬಾಯಿಯ ದುರ್ವಾಸನೆ ಹೆಚ್ಚಿನವರನ್ನು ಕಾಡುವ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಹಲವು ಬಗೆಯ ಮೌತ್ ವಾಶ್ ಗಳನ್ನು ಬಳಸಿ ಸೋತಿದ್ದೀರಾ…? ಹಾಗಾದರೆ ನೈಸರ್ಗಿಕ ಮೌತ್ ವಾಶ್ ಮಾಡಲು ಸಿದ್ಧರಾಗಿ.
ತೆಂಗಿನೆಣ್ಣೆ ಎಲ್ಲಾ ವಿಧಗಳಿಂದಲೂ ಅತ್ಯುತ್ತಮ ಮೌತ್ ವಾಶ್ ಆಗಬಲ್ಲದು. ಬಾಯಿಗೆ ಸ್ವಲ್ಪ ಎಣ್ಣೆ ಹಾಕಿ ಐದು ನಿಮಿಷ ಮುಕ್ಕಳಿಸಿ ಉಗುಳಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ತೊಳೆಯಿರಿ. ಇದರಿಂದ ಬಾಯಿಯ ವಾಸನೆ ಹೋಗುತ್ತದೆ.
ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಇದರಿಂದ ಬಾಯಿ ಮುಕ್ಕಳಿಸಿ. ಇದು ಹಲ್ಲಿನ, ಗಂಟಲಿನ ಹಾಗೂ ಬಾಯಿಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಲೊವೇರಾ ಜ್ಯೂಸ್, ಅಡುಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸಬಹುದು.
ಒಂದು ಕಪ್ ವಾಟರ್ ಗೆ 10 ಹನಿ ದಾಲ್ಚಿನಿ ಎಣ್ಣೆ ಮತ್ತು 10 ಹನಿ ಲವಂಗ ಎಣ್ಣೆ ಸೇರಿಸಿ. ಇದರಿಂದ ಬಾಯಿ ಮುಕ್ಕಳಿಸಿ. ದೀರ್ಘಕಾಲ ಇಡಬಹುದಾದ ಈ ಎಣ್ಣೆ ನಿಮ್ಮ ಬಾಯಿಯ ಕೆಟ್ಟ ವಾಸನೆಯನ್ನು ದೂರ ಮಾಡುತ್ತದೆ.