ಬೇಸಿಗೆಯಲ್ಲಿ ಪ್ರಾಣಿಗಳು ನೀರಿಗಾಗಿ ಬಹಳ ಪರಿತಪಿಸುತ್ತವೆ. ಕೆಲವರು ಮಾನವೀಯತೆ ತೋರಿ ಪ್ರಾಣಿಗಳಿಗೆ ನೀರುಣಿಸಿರುವ ಹಲವಾರು ವಿಡಿಯೋಗಳು ವೈರಲ್ ಆಗಿವೆ. ಹಕ್ಕಿಗಳಿಂದ ಹಿಡಿದು ವಿಷಕಾರಿ ಸರ್ಪದವರೆಗೂ ಕೆಲವರು ತಮ್ಮ ಕೈಯಾರೆ ನೀರುಣಿಸಿದ್ದಾರೆ. ಇದೀಗ ಇಂಥದ್ದೇ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
ಹೌದು, ಮಹಿಳೆಯೊಬ್ಬರು ಬಾಯಾರಿದ ಅಳಿಲಿಗೆ ನೀರುಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರು ಅಳಿಲಿಗೆ ಬಾಟಲಿಯಿಂದ ನೀರು ಕುಡಿಯಲು ಸಹಾಯ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಳಿಲು ತನ್ನ ಹಿಂಗಾಲುಗಳ ಮೇಲೆ ನಿಂತಿದ್ದು, ತ್ವರಿತವಾಗಿ ನೀರನ್ನು ಕುಡಿಯಲು ಸಜ್ಜಾಗಿದೆ. ಮಹಿಳೆಯು ತಾಳ್ಮೆಯಿಂದ ಬಾಟಲಿಯನ್ನು ಹಿಡಿದಿದ್ದರೆ, ಅದು ಗಟಗಟನೇ ನೀರು ಕುಡಿದಿದೆ.
ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಹೆಸರಿನ ಖಾತೆಯಿಂದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಇದು ಆಗಾಗ್ಗೆ ಹೃದಯಸ್ಪರ್ಶಿ ವಿಡಿಯೋಗಳನ್ನು ಹಂಚಿಕೊಳ್ಳುತ್ತದೆ. ವಿಡಿಯೋಗೆ, ಸ್ಟೇ ಹೈಡ್ರೇಟೆಡ್ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 1.6 ಮಿಲಿಯನ್ ವೀಕ್ಷಣೆಗಳು ಮತ್ತು 7300 ಕ್ಕೂ ಹೆಚ್ಚು ರೀಟ್ವೀಟ್ಗಳೊಂದಿಗೆ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ. ಅಳಿಲಿಗೆ ಸಹಾಯ ಮಾಡಿದ್ದಕ್ಕಾಗಿ ಬಳಕೆದಾರರು ಮಹಿಳೆಗೆ ಧನ್ಯವಾದ ಅರ್ಪಿಸಿದರು. ಅನೇಕರು ಮಹಿಳೆಯ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
https://twitter.com/buitengebieden/status/1541122207795003394?ref_src=twsrc%5Etfw%7Ctwcamp%5Etweetembed%7Ctwterm%5E1541122207795003394%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-woman-offers-water-thirsty-squirrel-kindness-melts-peoples-hearts-trending-5478320%2F