ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ.
ಕಾರ್ನ್ ಮ್ಯಾಗಿಗೆ ಬೇಕಾಗುವ ಪದಾರ್ಥ
ಎರಡು ಪ್ಯಾಕೆಟ್ ಮ್ಯಾಗಿ
ಒಂದು ಈರುಳ್ಳಿ (ಸಣ್ಣಗೆ ಕತ್ತರಿಸಿದ)
ಕಾರ್ನ್ ಒಂದು ಸಣ್ಣ ಬೌಲ್
ಕ್ಯಾರೆಟ್ (ತೆಳುವಾದ ಉದ್ದಗೆ ಕಟ್ ಮಾಡಿದ್ದು)
ಕ್ಯಾಪ್ಸಿಕಮ್ (ಸಣ್ಣಗೆ ಕತ್ತರಿಸಿದ್ದು)
ಒಂದು ಟೊಮೆಟೊ (ಸಣ್ಣದಾಗಿ ಕತ್ತರಿಸಿದ)
ಎರಡು ಹಸಿರು ಮೆಣಸಿನಕಾಯಿಗಳು (ಸಣ್ಣಗೆ ಕತ್ತರಿಸಿದ)
ಉಪ್ಪು ರುಚಿಗೆ ತಕ್ಕಷ್ಟು
ನೀರು ಅಗತ್ಯಕ್ಕೆ ತಕ್ಕಷ್ಟು
ಕಾರ್ನ್ ಮ್ಯಾಗಿ ಮಾಡುವ ವಿಧಾನ
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ. ನೀರು ಕುದಿಯಲು ಶುರುವಾದಾಗ ಈರುಳ್ಳಿ, ಕ್ಯಾರೆಟ್, ಕಾರ್ನ್, ಟೊಮೆಟೊ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಸ್ವಲ್ಪ ಮ್ಯಾಗಿ ಮಸಾಲೆಯನ್ನು ಹಾಕಿ. ತರಕಾರಿ ಬೇಯುತ್ತಿದ್ದಂತೆ ಮ್ಯಾಗಿ ಹಾಗೂ ಮ್ಯಾಗಿ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿ. ಸೂಪ್ ನಂತೆ ಮ್ಯಾಗಿ ತಿನ್ನಲು ಬಯಸಿದ್ರೆ ಸ್ವಲ್ಪ ನೀರಿರುವಾಗ್ಲೇ ಗ್ಯಾಸ್ ಆರಿಸಿ.