ಸಲಾಡ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ಈಗ ಹೆಚ್ಚಿನವರಿಗೆ ಊಟಕ್ಕಿಂತ ಸಲಾಡ್ ಗಳೇ ಹೆಚ್ಚು ಪ್ರಿಯ. ಇಲ್ಲಿ ಮ್ಯಾಕ್ರೋನಿ ಬಳಸಿ ಮಾಡುವ ಸಲಾಡ್ ಮಾಡುವ ವಿಧಾನ ಇದೆ ನೋಡಿ.
1 ಕಪ್-ಬೇಯಿಸಿದ ಮ್ಯಾಕ್ರೋನಿ, ¼ ಕಪ್-ಮಯೋನಿಸ್, ಬಿಳಿ ವಿನೇಗರ್-1 ಟೇಬಲ್ ಸ್ಪೂನ್, ಸಕ್ಕರೆ-1 ಟೀ ಸ್ಪೂನ್, ಸಾಸಿವೆ-1 ಟೀ ಸ್ಪೂನ್, ½ ಟೀ ಸ್ಪೂನ್-ಕಾಳುಮೆಣಸಿನ ಪುಡಿ, ¼ ಟೀ ಸ್ಪೂನ್-ಖಾರದ ಪುಡಿ, ¼ ಕಪ್-ಚಿಕ್ಕದ್ದಾಗಿ ಕತ್ತರಿಸಿದ ಈರುಳ್ಳಿ, ¼ ಕಪ್-ಗ್ರೀನ್ ಬೆಲ್ ಪೆಪ್ಪರ್ ಚಿಕ್ಕದಾಗಿ ಕತ್ತರಿಸಿದ್ದು, ¼ ಕಪ್- ರೆಡ್ ಬೆಲ್ ಪೆಪ್ಪರ್ (ಚಿಕ್ಕದ್ದಾಗಿ ಕತ್ತರಿಸಿದ್ದು), ¼ ಕಪ್-ತುರಿದ ಕ್ಯಾರೆಟ್, ಈರುಳ್ಳಿ ಸೊಪ್ಪು-1 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು.
ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುದಿಯಲು ಇಡಿ. ನಂತರ ಇದಕ್ಕೆ ಮ್ಯಾಕ್ರೋನಿ ಹಾಕಿ ಇದು ಬೇಯುವವರಗೆ 5 ನಿಮಿಷಗಳ ಕಾಲ ಬೇಯಿಸಿಕೊಂಡು ನೀರು ಬಸಿದುಕೊಳ್ಳಿ. ಇನ್ನೊಂದು ಬೌಲ್ ತೆಗೆದುಕೊಂಡು ಮಯೋನಿಸ್, ಸಾಸಿವೆ, ವಿನೇಗರ್, ಖಾರದ ಪುಡಿ, ಸಕ್ಕರೆ, ಉಪ್ಪು, ಕಾಳುಮೆಣಸು, ಈರುಳ್ಳಿ, ರೆಡ್ ಬೆಲ್ ಪೆಪ್ಪರ್, ಗ್ರೀನ್ ಬೆಲ್ ಪೆಪ್ಪರ್, ಕ್ಯಾರೆಟ್ ಹಾಕಿ ಮಿಕ್ಸ್ ಮಾಡಿಕೊಳ್ಳಿ ನಂತರ ಇದಕ್ಕೆ ಮ್ಯಾಕ್ರೋನಿ ಸೇರಿಸಿ ಮಿಕ್ಸ್ ಮಾಡಿಕೊಂಡು ಫ್ರಿಡ್ಜ್ ನಲ್ಲಿ 4 ಗಂಟೆಗಳ ಕಾಲ ಇಟ್ಟು ನಂತರ ಸರ್ವ್ ಮಾಡಿ.