ಮಾವಿನ ಹೆಸರು ಕೇಳಿದರೆ ಬಾಯಲ್ಲಿ ನೀರೂರುವುದು ಖಚಿತ. ಮಾವಿನ ಸೀಜನ್ ಬಂದ ಕೂಡಲೇ ಮಾವಿನ ಚಿತ್ರಾನ್ನ, ಉಪ್ಪಿನ ಕಾಯಿ, ಆಮ್ಚೂರ್, ಹೀಗೆ ಬಗೆ ಬಗೆಯ ಖಾದ್ಯಗಳು ರೆಡಿ. ನಾಲಿಗೆ ಚಪ್ಪರಿಸಿ ತಿನ್ನಬಹುದಾದ ಮಾವಿನ ಹಲವು ತಿನಿಸುಗಳಲ್ಲಿ ಮಾವಿನ ಗೊಜ್ಜು ಒಂದು. ಕೇವಲ 10 ನಿಮಿಷಗಳಲ್ಲಿ ಮಾಡಬಹುದಾದ ಮಾವಿನ ಕಾಯಿ ಗೊಜ್ಜು ಮಾಡುವ ವಿಧಾನ.
ಮಾವಿನ ಕಾಯಿಯನ್ನು ತೊಳೆದು ಸಿಪ್ಪೆ ಸಮೇತ ಬೇಯಲು ಬಿಡಿ.
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಉದ್ದಿನ ಬೇಳೆ, ಒಣ ಮೆಣಸಿನಕಾಯಿ, ಮೆಂತ್ಯೆ, ಇಂಗು, ತೆಂಗಿನ ಕಾಯಿ ತುರಿ ಇಷ್ಟನ್ನೂ ಹಾಕಿ ಘಮ ಬರುವವರೆಗೂ ಬಾಡಿಸಿ.
ಈಗ ಬೇಯಿಸಿರುವ ಮಾವಿನಕಾಯಿಯ ತಿರುಳನ್ನು ತೆಗೆದು ಮಿಕ್ಸಿ ಜಾರಿಗೆ ಹಾಕಿ. ಈಗಾಗಲೇ ಬಾಣಲೆಯಲ್ಲಿ ಹುರಿದಿರುವ ಮಸಾಲೆಯನ್ನು ಇದಕ್ಕೆ ಸೇರಿಸಿ ರುಬ್ಬಿಕೊಳ್ಳಿ. ನಂತರ ರುಬ್ಬಿದ ಮಿಶ್ರಣಕ್ಕೆ ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ಒಗ್ಗರಣೆ ಹಾಕಿ, ಸ್ವಲ್ಪ ಬೆಲ್ಲ ಸೇರಿಸಿ, ಒಂದು ಕುದಿ ಬಂದ ಮೇಲೆ ಇಳಿಸಿ. ಈಗ ನಾಲಿಗೆ ಚಪ್ಪರಿಸಿ ತಿನ್ನಬಹುದಾದ ಮಾವಿನ ಕಾಯಿ ಗೊಜ್ಜು ತಯಾರ್.