ರುಚಿಕರವಾದ ತಂದೂರಿ ಚಿಕನ್ ಅನ್ನು ಸವಿಯಬೇಕು ಎಂಬ ಆಸೆ ಆಗುತ್ತಿದೆಯಾ…? ಇಲ್ಲಿದೆ ನೋಡಿ ಸುಲಭ ವಿಧಾನ. ಮನೆಯಲ್ಲಿಯೇ ಮಾಡಿಕೊಂಡು ಸವಿಯಿರಿ.
ಬೇಕಾಗುವ ಸಾಮಗ್ರಿಗಳು:
ಚಿಕನ್ ಲೆಗ್ ಪೀಸ್ -2, ಶುಂಠಿ – ಬೆಳ್ಳುಳ್ಳಿ ಪೇಸ್ಟ್-2 ಟೀ ಸ್ಪೂನ್, ಎಣ್ಣೆ – 4 ಟೇಬಲ್ ಸ್ಪೂನ್, ಲಿಂಬೆ ಹಣ್ಣಿನ ರಸ – 2 ಟೇಬಲ್ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಕಾಳುಮೆಣಸಿನ ಪುಡಿ – 1/2 ಟೀ ಸ್ಪೂನ್, ಜೀರಿಗೆಪುಡಿ – 1/2 ಟೀ ಸ್ಪೂನ್, ಖಾರದಪುಡಿ – 2 ಟೀ ಸ್ಪೂನ್, ಚಿಕನ್ ತಂದೂರಿ ಪುಡಿ – 2 ಟೇಬಲ್ ಸ್ಪೂನ್, ಕೊತ್ತಂಬರಿ ಪುಡಿ – 1/2 ಟೀ ಸ್ಪೂನ್, ಬೆಣ್ಣೆ – 4 ಟೇಬಲ್ ಸ್ಪೂನ್, ಮೊಸರು – 2 ಟೇಬಲ್ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಚಿಕನ್ ಪೀಸ್ ಗೆ ಉಪ್ಪು, ಕಾಳುಮೆಣಸಿನ ಪುಡಿ, ಲಿಂಬೆಹಣ್ಣಿನ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಚ್ಚಿಕೊಂಡು 10 ನಿಮಿಷ ಹಾಗೇ ಇಟ್ಟುಬಿಡಿ. ನಂತರ ಒಂದು ಬೌಲ್ ಗೆ ಮೊಸರು, ಕಾಳುಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಖಾರದಪುಡಿ, ಚಿಕನ್ ತಂದೂರಿ ಪುಡಿ, ನಿಂಬೆಹಣ್ಣಿನ ರಸ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲಸಿ ಚಿಕನ್ ಗೆ ಮಿಕ್ಸ್ ಮಾಡಿ 2 ಗಂಟೆಗಳ ಕಾಲ ಹಾಗೆಯೇ ಇಟ್ಟುಬಿಡಿ.
ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೇ ಚಿಕನ್ ಪೀಸ್ ಅನ್ನು ಹಾಕಿ ಅದರ ಮೇಲೆ ಬೆಣ್ಣೆಯನ್ನು ಹಾಕಿ 25 ನಿಮಿಷಗಳ ಕಾಲ ಹದ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.