ಮಾವಿನಹಣ್ಣು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಈಗ ಎಲ್ಲಾ ಕಡೆ ಮಾವಿನಹಣ್ಣು ಸಿಗುತ್ತದೆ. ಹಾಗಾಗಿ ರುಚಿಕರವಾದ ಮಾವಿನಹಣ್ಣಿನ ಹಲ್ವಾ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು:
350 ಗ್ರಾಂ ಮಾವಿನಹಣ್ಣು, ½ ಕಾರ್ನ್ ಫ್ಲೋರ್, 1 ಕಪ್-ನೀರು, ¾ ಕಪ್-ಸಕ್ಕರೆ, 6 ಟೇಬಲ್ ಸ್ಪೂನ್-ತುಪ್ಪ, ¼ ಟೀ ಸ್ಪೂನ್-ಏಲಕ್ಕಿ ಪುಡಿ, ¼ ಕಪ್- ತೆಂಗಿನ ತುರಿ.
ಮಾಡುವ ವಿಧಾನ:
ಮೊದಲಿಗೆ ಮಾವಿನಹಣ್ಣಿನ ತಿರುಳನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರಿನಲ್ಲಿ ನಯವಾಗಿ ರುಬ್ಬಿಕೊಳ್ಳಿ. ಇದನ್ನು ಒಂದು ಅಗಲವಾದ ಪಾತ್ರೆಗೆ ತಗೆದುಕೊಂಡು ಅದಕ್ಕೆ ಕಾರ್ನ್ ಫ್ಲೋರ್, ನೀರು ಸೇರಿಸಿ ಚೆನ್ನಾಗಿ ಕೈಯಾಡಿಸಿ. ನಂತರ ಒಂದು ಬಾಣಲೆಯಲ್ಲಿ ಸಕ್ಕರೆ ಹಾಗೂ ನೀರು ಹಾಕಿ ಕರಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮಾವಿನಹಣ್ಣಿನ ಮಿಶ್ರಣವನ್ನು ಇದಕ್ಕೆ ಸೇರಿಸಿ ಚೆನ್ನಾಗಿ ತಿರುಗಿಸಿ.
ಸಣ್ಣ ಉರಿಯಲ್ಲಿ ಇಟ್ಟು ಕೈಯಾಡಿಸುತ್ತಾ ಇರಿ ಇದು ಸ್ವಲ್ಪ ದಪ್ಪಗಾಗುತ್ತಿದ್ದಂತೆ ತುಪ್ಪ ಹಾಕಿ ತಿರುಗಿಸುತ್ತಾ ಇರಿ. 20 ನಿಮಿಷಗಳ ನಂತರ ಇದು ಹದಕ್ಕೆ ಬರುತ್ತಿದ್ದಂತೆ ಏಲಕ್ಕಿ ಪುಡಿ ಸೇರಿಸಿ ಕೈಯಾಡಿಸಿ. ತುಪ್ಪ ತಳ ಬಿಡುವವರೆಗೆ ಕೈಯಾಡಿಸುತ್ತಾ ಇರಿ. ನಂತರ ಒಂದು ಪಾತ್ರೆಗೆ ಹಾಕಿ ತಣ್ಣಗಾಗುವುದಕ್ಕೆ ಬಿಟ್ಟು ಬಿಡಿ. ನಂತರ ಇದನ್ನು ಕತ್ತರಿಸಿಕೊಳ್ಳಿ. ತೆಂಗಿನಕಾಯಿ ತುರಿಯನ್ನು ಮೇಲೆ ಹಾಕಿ.