ಗುಲಾಬ್ ಜಾಮೂನ್ ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಇದರ ನಡುವೆ ಚಾಕೋಲೆಟ್ ತುಂಡು ಇಟ್ಟರೆ ಕೇಳಬೇಕಾ…? ನಾಲಗೆಗೆ ರಸದೌತಣವನ್ನೇ ಉಣಿಸಿಬಿಡುತ್ತದೆ ಈ ಜಾಮೂನ್. ಮರೆಯದೇ ಮನೆಯಲ್ಲಿ ಮಾಡಿ ಸವಿಯಿರಿ.
ಬೇಕಾಗುವ ಸಾಮಾಗ್ರಿಗಳು:
1 ಕಪ್ – ಖೋವಾ, 3 ಟೇಬಲ್ ಸ್ಪೂನ್ – ಮೈದಾ, ¼ ಟೀ ಸ್ಪೂನ್ – ಬೇಕಿಂಗ್ ಸೋಡಾ, ಚಿಟಿಕೆ – ಏಲಕ್ಕಿ ಪುಡಿ, ¼ ಕಪ್ – ಕತ್ತರಿಸಿದ ಚಾಕೋಲೇಟ್ ತುಂಡುಗಳು, ಕರಿಯಲು – ಎಣ್ಣೆ, 2 ಕಪ್ – ಸಕ್ಕರೆ, 2 ಕಪ್- ನೀರು, ಏಲಕ್ಕಿ – 1 ಟೀ ಸ್ಪೂನ್, 3 ಹನಿ – ರೋಸ್ ಎಸೆನ್ಸ್.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸಕ್ಕರೆ ನೀರು ಹಾಕಿ 1 ಎಳೆ ಪಾಕ ರೀತಿ ಮಾಡಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ. ಗ್ಯಾಸ್ ಆಫ್ ಮಾಡಿ.
ನಂತರ ಇನ್ನೊಂದು ಬೌಲ್ ಗೆ ಖೋವಾ ಹಾಕಿಕೊಂಡು ಅದಕ್ಕೆ ಚಿಟಕಿ ಏಲಕ್ಕಿ ಪುಡಿ ಸೇರಿಸಿ ನಂತರ ಮೈದಾ, ಬೇಕಿಂಗ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಇದರಿಂದ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಕೈಯಿಂದ ನಿಧಾನಕ್ಕೆ ಒತ್ತಿ ಅದರ ಮದ್ಯೆ ಚಾಕೋಲೆಟ್ ತುಂಡೊಂದನ್ನು ಇಟ್ಟು, ಮತ್ತೆ ಪುನಃ ಉಂಡೆಕಟ್ಟಿ ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಸಕ್ಕರೆ ಪಾಕಕ್ಕೆ ಸೇರಿಸಿ 4 ಗಂಟೆಗಳ ಕಾಲ ಹಾಗೆಯೇ ಇಡಿ. ನಂತರ ಸವಿಯಿರಿ.