ಅಣಬೆಯನ್ನು ಸಾಮಾನ್ಯವಾಗಿ ಬಹುತೇಕರು ಇಷ್ಟ ಪಡುತ್ತಾರೆ. ಅಣಬೆ ಅಡುಗೆಯ ರುಚಿ ಸವಿದವರಿಗೆ ಮಾತ್ರ ಗೊತ್ತು. ಅಣಬೆ ಬಳಸಿ ಮಾಡುವ ಟೋಸ್ಟ್ ಬಾಯಲ್ಲಿ ನೀರು ತರಿಸುತ್ತದೆ. ಮನೆಯಲ್ಲಿಯೇ ಮಾಡಬಹುದಾದ ಅಣಬೆ ಟೋಸ್ಟ್ ರೆಸಿಪಿ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು: ಅರ್ಧ ಕೆ.ಜಿ. ಅಣಬೆ, ಒಂದು ಸ್ಪೂನ್ ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 250 ಗ್ರಾಂ ಬೆಣ್ಣೆ, 1 ಪೌಂಡ್ ಬ್ರೆಡ್.
ತಯಾರಿಸುವ ವಿಧಾನ: ಅಣಬೆಯನ್ನು ಚೆನ್ನಾಗಿ ತೊಳೆದು ಸಣ್ಣ ಉರಿಯಲ್ಲಿ ಬೆಣ್ಣೆ ಹಾಕಿ ಹುರಿಯಿರಿ. ಅದಕ್ಕೆ ಉಪ್ಪು, ಮೆಣಸಿನ ಪುಡಿ ಸೇರಿಸಿ ಕೆಳಗೆ ಇಳಿಸಿರಿ. ತೆಳುವಾದ ಬ್ರೆಡ್ ಸ್ಲೈಸ್ ಗಳನ್ನು ತೆಗೆದುಕೊಂಡು ಸುತ್ತಲೂ ಇರುವ ಕಂದು ಬಣ್ಣವನ್ನು ತೆಗೆಯಿರಿ ಅದರ ಮೇಲೆ ತೆಳುವಾಗಿ ಬೆಣ್ಣೆ ಹಚ್ಚಿ ನಂತರ ಅಣಬೆ ಮಿಶ್ರಣವನ್ನು ಹರಡಿರಿ.
ಅದನ್ನು ಸುರುಳಿ ಮಾಡಿ ಟೂತ್ ಪಿಕ್ ಸಿಕ್ಕಿಸಿ. ಹೀಗೆ ಎಲ್ಲಾ ಬ್ರೆಡ್ ಗಳನ್ನು ರೆಡಿ ಮಾಡಿಕೊಂಡು ಅವನ್ನು ಓವನ್ ನಲ್ಲಿ ಇರಿಸಿ ಬೇಕ್ ಮಾಡಿ ಬಿಸಿಯಾಗುತ್ತಲೇ ತಿನ್ನಿರಿ.