ಬಾದಾಮಿ ಎಣ್ಣೆ ಕೂದಲಿಗೆ ಪ್ರಯೋಜನಕಾರಿ ಅನ್ನೋದು ಎಲ್ಲರಿಗೂ ಗೊತ್ತಿದೆ. ಕೂದಲಿನ ಬೇರುಗಳ ಪೋಷಣೆಗೆ ಇದು ಸಹಾಯ ಮಾಡುತ್ತದೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಪ್ರೊಟೀನ್ ಮತ್ತು ಫೋಲಿಕ್ ಆಸಿಡ್ ಇರುವುದರಿಂದ ಕೂದಲು ಹೊಳೆಯುವಂತೆ ಮಾಡುತ್ತದೆ.
ಕೂದಲಿಗೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆಹೊಟ್ಟು ಸೇರಿದಂತೆ ಅನೇಕ ಕೂದಲಿನ ಸಮಸ್ಯೆ ದೂರವಾಗುತ್ತದೆ. ಆದರೆ ಬಾದಾಮಿ ಎಣ್ಣೆಗೆ ಇನ್ನು ಕೆಲವು ವಸ್ತುಗಳನ್ನು ಬೆರೆಸಿದರೆ ಅದರ ಲಾಭ ದುಪ್ಪಟ್ಟಾಗುತ್ತದೆ. ಅದ್ಯಾವುದು ಅನ್ನೋದನ್ನು ನೋಡೋಣ.
ನಿಂಬೆ ರಸ: ಬಾದಾಮಿ ಎಣ್ಣೆಗೆ ನಿಂಬೆ ರಸವನ್ನು ಬೆರೆಸಿದರೆ ಅದು ತಲೆಹೊಟ್ಟಿಗೆ ರಾಮಬಾಣವಾಗಬಲ್ಲದು. ಒಂದು ಬೌಲ್‌ನಲ್ಲಿ ಕೆಲವು ಹನಿಗಳಷ್ಟು ಬಾದಾಮಿ ಎಣ್ಣೆ ಮತ್ತು ಒಂದೆರಡು ಚಮಚ ನಿಂಬೆ ರಸವನ್ನು ಬೆರೆಸಿಕೊಳ್ಳಿ. ಅದನ್ನು ನಿಮ್ಮ ಕೂದಲಿಗೆ ಮತ್ತು ಕೂದಲಿನ ಬುಡಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. 1 ಗಂಟೆಯವರೆಗೆ ಅದನ್ನು ಹಾಗೇ ಬಿಡಿ. ನಂತರ ಶಾಂಪೂವಿನಿಂದ ತಲೆಸ್ನಾನ ಮಾಡಿಕೊಳ್ಳಿ. ಅಥವಾ ಈ ಮಿಶ್ರಣವನ್ನು ರಾತ್ರಿ ತಲೆಗೆ ಹಚ್ಚಿಕೊಂಡು ಮಲಗಿ ಮರುದಿನ ಬೆಳಗ್ಗೆ ಕೂಡ ತಲೆಸ್ನಾನ ಮಾಡಬಹುದು. ಈ ರೀತಿ ಮಾಡುವುದರಿಂದ ಕೂದಲಿನ ಬೆಳವಣಿಗೆ ವೇಗವಾಗಿ ಆಗುತ್ತದೆ.
ಜೇನುತುಪ್ಪ : ಬಾದಾಮಿ ಎಣ್ಣೆಗೆ ಜೇನು ತುಪ್ಪ ಮತ್ತು ಮತ್ತು ಬಾಳೆಹಣ್ಣನ್ನು ಬೆರೆಸಿ ಅದನ್ನು ಕೂದಲಿಗೆ ಬಳಸುವುದರಿಂದಲೂ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಈ ಮೂರು ವಸ್ತುಗಳನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲಿಗೆ ಅನ್ವಯಿಸಿ. ಅರ್ಧ ಗಂಟೆ ಅಥವಾ 1 ಗಂಟೆ ಅದು ಒಣಗಲು ಬಿಡಿ. ನಂತರ ಸೌಮ್ಯವಾದ ಶಾಂಪೂ ಬಳಸಿ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಸುಂದರವಾಗುತ್ತೆ. ಜೊತೆಗೆ ಕೂದಲಿನ ಹೊಳಪು ಕೂಡ ಹೆಚ್ಚುತ್ತದೆ.