ಬಾದಾಮಿ ಡ್ರೈಫ್ರೂಟ್ ಎಂದು ಹೆಚ್ಚಿನ ಜನ ಭಾವಿಸಿದ್ದಾರೆ. ಆದ್ರೆ ಇದೊಂದು ಬೀಜ. ಬಾದಾಮಿ ಸೇವನೆಯು ಮೆದುಳಿಗೆ ರಾಮಬಾಣವೆಂದು ಪರಿಗಣಿಸಲಾಗುತ್ತದೆ. ಬಾದಾಮಿ ಮರಗಳು ಪರ್ವತ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ. ಇರಾನ್, ಇರಾಕ್, ಮೆಕ್ಕಾ, ಶಿರಾಜ್ ಮೊದಲಾದ ಸ್ಥಳಗಳಲ್ಲಿ ಬಾದಾಮಿ ಮರಗಳು ಹೇರಳವಾಗಿವೆ.
ಬಾದಮಿಯನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡಿದ್ರೆ ನಿಮ್ಮ ಮೆದುಳಿನ ನ್ಯೂರಾನ್‌ಗಳನ್ನು ಸಕ್ರಿಯಗೊಳಿಸುವುದು ಸುಲಭವಾಗುತ್ತದೆ. ಟ್ಯಾನಿನ್ ಎಂಬ ಉಪ್ಪಿನ ಸಂಯುಕ್ತವು ಬಾದಾಮಿಯಲ್ಲಿದೆ. ಇದನ್ನು ಸೇವಿಸುವುದರಿಂದ ಬಾದಾಮಿಯ ಸಂಪೂರ್ಣ ಪೋಷಕಾಂಶಗಳು ದೇಹಕ್ಕೆ ಸಿಗುವುದಿಲ್ಲ. ಅದಕ್ಕಾಗಿಯೇ ನಾವು ಬಾದಾಮಿಯನ್ನು ಸಿಪ್ಪೆ ಸಮೇತ ಸೇವಿಸಬಾರದು.
ಸಿಪ್ಪೆ ತೆಗೆದೇ ತಿನ್ನಬೇಕು. ಕೆಲವರು ಒಣ ಬಾದಾಮಿಯನ್ನೇ ಬಾಯಿಗೆಸೆದುಕೊಳ್ಳುತ್ತಾರೆ. ಸಿಪ್ಪೆ ಸಮೇತ ಬಾದಾಮಿಯನ್ನು ತಿನ್ನುವುದರಿಂದ ದೇಹದಲ್ಲಿ ಪಿತ್ತದ ಅಸಮತೋಲನ ಹೆಚ್ಚಾಗತೊಡಗುತ್ತದೆ. ಇದರಿಂದಾಗಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಿಪ್ಪೆ ಸಹಿತ ಬಾದಾಮಿಯನ್ನು ತಿನ್ನುವುದರಿಂದ ಅದರ ಕೆಲವು ಕಣಗಳು ನಿಮ್ಮ ಕರುಳಿನಲ್ಲಿ ಸಿಲುಕಿಕೊಳ್ಳುತ್ತವೆ. ಈ ಕಾರಣದಿಂದಾಗಿ ಹೊಟ್ಟೆ ನೋವು, ಒಂದು ರೀತಿಯ ಸುಡುವಿಕೆ, ಗ್ಯಾಸ್ಟ್ರಿಕ್ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನಿ.
ಬಾದಾಮಿ ಸೇವನೆ ಹೇಗೆ?
ಬಾದಾಮಿಯನ್ನು ಅನೇಕ ಭಕ್ಷ್ಯಗಳನ್ನು ಮಾಡಲು ಸಹ ಬಳಸಲಾಗುತ್ತದೆ. ಆದರೆ ಬಾದಾಮಿಯನ್ನು ದಿನನಿತ್ಯ ಸೇವಿಸುವರು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಸಿಪ್ಪೆ ತೆಗೆದು ಸೇವಿಸಿ. ಇದು ಬಾದಾಮಿಯ ಶಾಖವನ್ನು ಕಡಿಮೆ ಮಾಡುತ್ತದೆ. ಬಾದಾಮಿಯನ್ನು ಬೆಳಗ್ಗೆ ರುಬ್ಬಿ ಹಾಲಿಗೆ ಸೇರಿಸಿ ಸೇವಿಸಬಹುದು. ಅಲ್ಲದೆ ಇದನ್ನು ಹುರಿದುಕೊಂಡರೆ ಸಂಜೆಯ ಸ್ನಾಕ್ಸ್‌ಗೂ ಚೆನ್ನಾಗಿರುತ್ತದೆ. ತಜ್ಞರು ದಿನಕ್ಕೆ 5-8 ಬಾದಾಮಿಗಳನ್ನು ತಿನ್ನುವಂತೆ ಶಿಫಾರಸು ಮಾಡುತ್ತಾರೆ.