ಎಷ್ಟೇ ತೊಳೆದರೂ ಬಾತ್ ರೂಂ ಒಂದು ರೀತಿಯ ವಾಸನೆ ಬರುತ್ತಿರುತ್ತದೆ. ಹಾಗೇ ಬಾತ್ ರೂಂ ಗೋಡೆಗಳಲ್ಲಿನ ಟೈಲ್ಸ್ ಉಪ್ಪು ನೀರಿನಿಂದ ಒಂದು ರೀತಿಯ ಬಣ್ಣ ಕಳೆದುಕೊಂಡವರ ಹಾಗೆ ಇರುತ್ತದೆ. ಇದನ್ನು ಸುಲಭವಾಗಿ ಕ್ಲೀನ್ ಮಾಡಲು ಟಿಪ್ಸ್ ಇಲ್ಲಿದೆ.
ಮಾರ್ಕೆಟ್ ನಿಂದ ದುಬಾರಿ ಬೆಲೆ ತೆತ್ತು ಒಂದಷ್ಟು ಕೆಮಿಕಲ್ ನಿಂದ ಕೂಡಿದ ಲಿಕ್ವಿಡ್, ಪೌಡರ್ ಗಳನ್ನು ತಂದು ಕ್ಲೀನ್ ಮಾಡುತ್ತೇವೆ. ಅದರ ಬದಲು ಮನೆಯಲ್ಲಿಯೇ ಇರುವ ಕೆಲವೊಂದು ವಸ್ತುಗಳನ್ನು ಉಪಯೋಗಿಸಿಕೊಂಡು ಸುಲಭವಾಗಿ ಕ್ಲೀನ್ ಮಾಡಬಹುದು.
1 ಕಪ್ ಅಕ್ಕಿ ಹಿಟ್ಟು ಅನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಅದಕ್ಕೆ ಎರಡು ಪಚ್ಚಕರ್ಪೂರವನ್ನು ಪುಡಿ ಮಾಡಿ ಹಾಕಿ. ಹಾಗೇ ಒಂದು ಕಪ್ ಲಿಂಬೆಹಣ್ಣಿನ ರಸವನ್ನು ಹಾಕಿ. ಹಾಗೆ 2 ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಇದನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ಬಾತ್ ರೂಂ ಟೈಲ್ಸ್ ಗೆ ಇದನ್ನು ಸ್ಪ್ರೇ ಮಾಡಿ. ನಂತರ ಒಂದು ಬ್ರಷ್ ನ ಸಹಾಯದಿಂದ ಇದನ್ನು ತಿಕ್ಕಿ. ನಂತರ ನೀರಿನಿಂದ ತೊಳೆಯಿರಿ. ಕೊಳೆ ಹೋಗಿ ಬಾತ್ ರೂಂ ಕ್ಲೀನ್ ಆಗುತ್ತದೆ.