ಹಾಸನ: ಬಾಡೂಟಕ್ಕೆ ಕರೆದಿಲ್ಲ ಎಂಬ ಕಾರಣಕ್ಕೆ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನಲ್ಲಿ ನಡೆದಿದೆ.
ಶರತ್ (28) ಮೃತ ಯುವಕ. ಶರತ್ ಸಂಬಂಧಿಕರು ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಬಳಿಕ ಬಾಡೂಟ ಆಯೋಜನೆ ಮಾಡಿದ್ದರು. ತಮ್ಮನನ್ನೇ ಕರೆಯದೇ ಹಬ್ಬದೂಟ ಹಾಕಿದ್ದಕ್ಕೆ ಜಗಳ ಆರಂಭವಾಗಿದೆ. ಸಹೋದರರಿಬ್ಬರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಇದೇ ವಿಚಾರವಾಗಿ ವಾಗ್ವಾದ ನಡೆದು ಬಳಿಕ ಪುರಲೆಹಳ್ಳಿಯ ಧನಪಾಲ್, ಅರ್ಜುನ್, ನಟರಾಜ್, ಮಂಜುನಾಥ್ ಎಂಬುವವರು ಶರತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶರತ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಕೊಲೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.