ತನ್ನ ಬೀಚ್‌ಗಳಿಂದ ಖ್ಯಾತಿ ಪಡೆದಿರುವ ಇಂಡೋನೇಷ್ಯಾ ಪ್ರವಾಸಿಗರನ್ನು ಸೆಳೆಯಲು ವಿನೂತನ ಪ್ರಯೋಗಕ್ಕೆ ಮುಂದೆ ಬಂದಿದೆ.
ಇಲ್ಲಿನ ದಟ್ಟಡವಿಗಳ ನಡುವೆ ಇರುವ ಸ್ಥಳೀಯ ತಳಿಯಾದ ಆಸ್ಪರ್ ಬಿದಿರಿನ ಮರಗಳ ಮೇಲೆ ನಿರ್ಮಾಣ ಮಾಡಲಾದ ಆರಾ ಹೌಸ್, ಸುತ್ತಲಿನ ಬಾಲಿನೀಸ್ ಕಾನನದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುತ್ತಿವೆ.
ಪರಿಸರ ಸ್ನೇಹಿಯಾದ ಈ ಮನೆಗಳಲ್ಲಿ ಬಿದಿರಿನಿಂದ ಮಾಡಿರುವ ಮೆಟ್ಟಿಲುಗಳು, ಗೋಡೆಗಳು, ಪೀಠೋಪಕರಣಗಳೆಲ್ಲವೂ ಇವೆ. ಇಷ್ಟು ಸಾಲದೆಂಬಂತೆ, ಮೂರು ಅಂತಸ್ತಿನ ಈ ಮನೆಗಳಿಗೆ ಮೇಲ್ಛಾವಣಿಗಳೂ ಇದ್ದು, ಖಾಸಗಿ ಈಜುಕೊಳವೂ ಲಭ್ಯವಿದೆ.
ಇಂಥ ಮನೆಗಳಲ್ಲಿ ಒಂದಷ್ಟು ಹೊತ್ತು ಕಳೆಯಲಾದರೂ ಇಂಡೋನೇಷ್ಯಾಗೆ ಬರಬೇಕು ಎನ್ನುವಷ್ಟು ಸೆಳೆತವನ್ನು ಪ್ರವಾಸಿಗರಲ್ಲಿ ಮೂಡಿಸಲು, ಇಂಡೋನೇಷ್ಯಾ ಸರಕಾರ ವಿನೂತನ ’ಗ್ರೀನ್ ವಿಲೇಜ್’ ಅಭಿಯಾನ ಆರಂಭಿಸಿದೆ.
https://www.instagram.com/p/B0lYBayAxe8/?utm_source=ig_embed