ಬಾಟಲ್ ನೀರು ಬಳಸಿ ಬರಿಗೈಯಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಿದ ತಜ್ಞರು..! 11-03-2022 8:03AM IST / No Comments / Posted In: Latest News, Live News, International ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವು ಹದಿನೈದನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಉಕ್ರೇನಿಯನ್ ಬಾಂಬ್ ವಿಲೇವಾರಿ ಘಟಕವು ರಷ್ಯಾದ ಬಾಂಬ್ ಅನ್ನು ಬರಿಗೈ ಮತ್ತು ನೀರಿನ ಬಾಟಲಿಯಿಂದ ನಿಶ್ಯಸ್ತ್ರಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉಕ್ರೇನ್ ನಲ್ಲಿ ಪರಾಕ್ರಮ/ಸಾಹಸದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಂಡುಬರುತ್ತಿದೆ. ಇದೀಗ ಬಾಂಬ್ ನಿಷ್ಕ್ರಿಯ ತಜ್ಞರು ರಷ್ಯಾದ ಬಾಂಬ್ ಅನ್ನು ತಮ್ಮ ಕೈಗಳಿಂದ, ಕೇವಲ ಬಾಟಲ್ ನೀರಿನ ಮುಖಾಂತರ ನಿಶ್ಯಸ್ತ್ರಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ಯೋಧರ ಶೌರ್ಯ ಕಾರ್ಯವು ವಿಶ್ವಾದ್ಯಂತ ವ್ಯಾಪಕ ಪ್ರಶಂಸೆಗಳನ್ನು ಗಳಿಸಿದೆ. ಅವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಅವರು ಉಕ್ಕಿನ ನರಗಳನ್ನು ಹೊಂದಿದ್ದಾರೆ ಎಂದು ಪತ್ರಕರ್ತರೊಬ್ಬರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಚಾರ್ಲ್ಸ್ ಲಿಸ್ಟರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಮಧ್ಯೆ, ಫೋಟೋಗಳು ಮತ್ತು ವಿಡಿಯೋಗಳಲ್ಲಿ ಉಕ್ರೇನಿಯನ್ನರು ಟ್ಯಾಂಕ್‌ಗಳ ಮುಂದೆ ನಿರ್ಭಯವಾಗಿ ನಿಂತಿರುವುದನ್ನು ತೋರಿಸಿವೆ. ರಷ್ಯಾದ ಸೈನಿಕರನ್ನು ನಿರ್ಭಯವಾಗಿ ಎದುರಿಸುತ್ತಿರುವುದಲ್ಲದೆ, ತಮ್ಮ ಮಾತೃಭೂಮಿಯನ್ನು ರಕ್ಷಿಸಲು ಯಾವ ತ್ಯಾಗಕ್ಕೂ ಸಿದ್ಧರಾಗಿದ್ದಾರೆ. This #Russia-dropped bomb would flatten a building — and yet these #Ukraine EODs defuse it with 2 hands and a bottle of water, while shells audibly land nearby. Mind boggling bravery.pic.twitter.com/KvCZeOxRyz — Charles Lister (@Charles_Lister) March 9, 2022