ದಕ್ಷಿಣ ಭಾರತದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರ ಬಿಡುಗಡೆಯಾಗಿ 40 ದಿನಗಳು ಕಳೆದ್ರೂ ಪ್ರೇಕ್ಷಕರನ್ನು ಸೆಳೆಯುತ್ತಲೇ ಇದೆ. ‘ಕಾಂತಾರ’ ಚಿತ್ರ ಥಿಯೇಟರ್ಗಳಲ್ಲಿ ನಿರಂತರವಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರ ವಿಶ್ವಾದ್ಯಂತ 400 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ.
ಸೆಪ್ಟೆಂಬರ್ 30 ರಂದು ಕನ್ನಡದಲ್ಲಿ ‘ಕಾಂತಾರ’ ಮೊದಲು ಬಿಡುಗಡೆಯಾಗಿತ್ತು. ದಕ್ಷಿಣ ಭಾಷೆಯಲ್ಲಿ ಅದ್ಭುತ ಪ್ರದರ್ಶನ ಕಂಡಿತ್ತು. ನಂತರ ಅಕ್ಟೋಬರ್ 14 ರಂದು ಹಿಂದಿಯಲ್ಲೂ ‘ಕಾಂತಾರ’ ರಿಲೀಸ್ ಮಾಡಲಾಯ್ತು. ಅಲ್ಲಿನ ಪ್ರೇಕ್ಷಕರಿಗೂ ಕಾಂತಾರ ಸಿಕ್ಕಾಪಟ್ಟೆ ಇಷ್ಟವಾಗಿದೆ. ಬಾಕ್ಸ್ ಆಫೀಸ್ನಲ್ಲಿ ಚಿಂದಿ ಉಡಾಯಿಸಿದೆ. ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್, ವಿಶ್ವದಾದ್ಯಂತ ‘ಕಾಂತಾರ’ ಮಾಡಿರೋ ಕಲೆಕ್ಷನ್ ಬಗ್ಗೆ ಇತ್ತೀಚಿನ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ತರಣ್ ಪ್ರಕಾರ ‘ಕಾಂತಾರ’ 400 ಕೋಟಿ ಗಳಿಸುವ ಮೂಲಕ ಹೊಸ ದಾಖಲೆಯನ್ನು ಮಾಡಿದೆ.
ಕರ್ನಾಟಕ – 168.50 ಕೋಟಿ
ಆಂಧ್ರಪ್ರದೇಶ-ತೆಲಂಗಾಣ – 60 ಕೋಟಿ
ತಮಿಳುನಾಡು – 12.70 ಕೋಟಿ
ಕೇರಳ – 19.20 ಕೋಟಿ
ಉತ್ತರ ಭಾರತ – 96 ಕೋಟಿ
ಭಾರತದಲ್ಲಿ ಅಮೋಘ ಪ್ರದರ್ಶನ ನೀಡಿದ ‘ಕಾಂತಾರ’ ಚಿತ್ರಕ್ಕೆ ವಿದೇಶಗಳಲ್ಲೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ‘ಕಾಂತಾರ’ ವಿದೇಶಗಳಲ್ಲಿ ಈಗಾಗ್ಲೇ 44.50 ಕೋಟಿ ರೂಪಾಯಿ ಬಾಚಿಕೊಂಡಿದೆ. ನಟ ಮತ್ತು ನಿರ್ದೇಶಕರಾಗಿ ರಿಷಬ್ ಶೆಟ್ಟಿ ‘ಕಾಂತಾರ’ದಲ್ಲಿ ಅದ್ಭುತ ಅಭಿನಯ ಮಾಡಿದ್ದಾರೆ. ಹಾಗಾಗಿ ಸಿನೆಮಾದ ಯಶಸ್ಸಿನ ಶ್ರೇಯಸ್ಸು ರಿಷಭ್ಗೆ ಸಲ್ಲಬೇಕು. ಕಾಂತಾರದ ಹಿಂದಿ ಅವತರಣಿಕೆ 80 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಹಾಗಾಗಿ ಇದು ಕೂಡ ವರ್ಷದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲೊಂದು.