ಉಕ್ರೇನ್ ಮೇಲೆ ರಷ್ಯಾದ ಯುದ್ಧವು 16 ನೇ ದಿನಕ್ಕೆ ಕಾಲಿಡುತ್ತಿದ್ದಂತೆ, ಎರಡು ದಶಲಕ್ಷಕ್ಕೂ ಹೆಚ್ಚು ಜನರು ದೇಶವನ್ನು ತೊರೆದಿದ್ದಾರೆ. ಹಲವಾರು ನಗರಗಳು ಮುತ್ತಿಗೆಗೆ ಒಳಗಾಗಿವೆ. ಯುದ್ಧ ಪೀಡಿತ ದೇಶದ ಕರುಳು ಹಿಂಡುವ ಫೋಟೋಗಳು ಮತ್ತು ವಿಡಿಯೋಗಳು ಆನ್ಲೈನ್ ನಲ್ಲಿ ಕಾಣಿಸಿಕೊಳ್ಳುತ್ತಿದೆ.
ಇಂತಹ ಕಠೋರ ದೃಶ್ಯಗಳ ನಡುವೆ, ಈ ಉಕ್ರೇನಿಯನ್ ಮ್ಯೂಸಿಕ್ ಬ್ಯಾಂಡ್ ವೊಂದು ಬಾಂಬ್ ಶೆಲ್ಟರ್‌ನಿಂದ ತಮ್ಮ ಪ್ರದರ್ಶನಗಳನ್ನು ಯೂಟ್ಯೂಬ್ ನಲ್ಲಿ ಲೈವ್-ಸ್ಟ್ರೀಮ್ ಮಾಡುತ್ತಿದೆ. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸೆಲೋ ಐ ಲುಡಿ ಉಕ್ರೇನಿಯನ್ ರಾಕ್ ಬ್ಯಾಂಡ್ ಆಗಿದ್ದು, ಅವರು ತಮ್ಮ ಸ್ಟುಡಿಯೋದಿಂದ ತಮ್ಮ ಪ್ರದರ್ಶನಗಳನ್ನು ಲೈವ್-ಸ್ಟ್ರೀಮ್ ಮಾಡುತ್ತಿದ್ದಾರೆ. ಬ್ಯಾಂಡ್‌ಲೀಡರ್ ಅಲೆಕ್ಸ್ ಅವರ ಮನೆ ಆಕ್ರಮಣದ ಸಮಯದಲ್ಲಿ ನಾಶವಾಯಿತು. ಅಂದಿನಿಂದ, ಆತ ಮತ್ತು ಇತರೆ ಬ್ಯಾಂಡ್‌ಮೇಟ್‌ಗಳು ಬಾಂಬ್ ಶೆಲ್ಟರ್‌ಗೆ ಸ್ಥಳಾಂತರಗೊಂಡಿದ್ದಾರೆ.
ಇಂತಹ ಕಷ್ಟದ ಸಮಯದಲ್ಲೂ ರಾಕ್ ಬ್ಯಾಂಡ್ ಆಯೋಜಿಸುತ್ತಿರುವ ಅವರ ಉತ್ಸಾಹವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.