alex Certify ಬಹೂಪಯೋಗಿ ‘ನೈಲ್ ಪಾಲಿಶ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹೂಪಯೋಗಿ ‘ನೈಲ್ ಪಾಲಿಶ್’

ನೈಲ್ ಪಾಲಿಶ್ ಹಾಕುವುದರಿಂದ ನಿಮ್ಮ ಉಗುರುಗಳ ಅಂದ, ಹೊಳಪು ಹೆಚ್ಚುತ್ತದೆ ಎಂಬುದು ನಿಮಗೆಲ್ಲಾ ತಿಳಿದ ವಿಷಯವೇ. ಅದರ ಹೊರತಾಗಿ ನೇಲ್ ಪಾಲಿಶ್ ನಿಂದ ಹಲವು ಉಪಯೋಗಳಿವೆ. ಗೊತ್ತೇ?

ನಿಮ್ಮ ಮನೆಯಲ್ಲಿರುವ ಹಳೆಯ ಆಭರಣಗಳನ್ನು ಬಳಸಲಾಗದು ಎಂದು ಎಸೆಯುವ ಬದಲು ಅದಕ್ಕೆ ನಿಮ್ಮ ಉಡುಪಿಗೊಪ್ಪುವ ಬಣ್ಣದಿಂದ ಪೇಂಟ್ ಮಾಡಿ. ಇದರಿಂದ ಆಭರಣ ಹೊಳೆಯುವುದು ಮಾತ್ರವಲ್ಲ ಹೊಸತರಂತೆಯೂ ಕಾಣಿಸುತ್ತದೆ. ಹೇರ್ ಬ್ಯಾಂಡ್, ಪಿನ್ ಗಳಿಗೂ ನಿಮ್ಮ ಡ್ರೆಸ್ ಗೊಪ್ಪುವ ಬಣ್ಣ ಹಚ್ಚಿ ಬಳಸಬಹುದು.

ನಿಮ್ಮ ಹೊಸ ಕಾರು ಅಥವಾ ಬೈಕ್ ನ ಮೇಲ್ಮೈ ಗೋಡೆಗೆ ತಾಗಿ ಮೇಲಿನ ಭಾಗದ ಬಣ್ಣ ಕಿತ್ತು ಹೋಗಿದ್ದರೆ ಅದೇ ಬಣ್ಣ ನೈಲ್ ಪಾಲಿಶ್ ತಂದು ತೆಳುವಾಗಿ ಹಚ್ಚಿ.

ಅವಸರದಲ್ಲಿ ಹುಡುಕುವಾಗ ಗಮ್ ಕೈಗೆ ಸಿಗುತ್ತಿಲ್ಲವೇ. ಹಾಗಿದ್ದರೆ ನೇಲ್ ಪಾಲಿಶ್ ಹಚ್ಚುವ ಮೂಲಕ ನಿಮ್ಮ ಲಕೋಟೆಗೆ ಗಮ್ ಹಾಕಿ. ಇದು ಕೂಡಾ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...