ಮದುವೆಯ ಋತು ಶುರುವಾದಾಗ, ಒಬ್ಬರು ಇಬ್ಬರಾಗುವ ಕಾಲ. ಗಟ್ಟಿಮೇಳ ಮೊಳಗುತ್ತದೆ. ಅದ್ಧೂರಿ ಮದುವೆಯಿಂದ ಹಿಡಿದು ಸರಳ ಮದುವೆಗಳು ನಡೆಯುತ್ತವೆ.
ಆದ್ರೆ ಕಂಕಣ ಕೂಡಿ ಬರದೆ ದೇವರ ಮೊರೆ ಹೋದವರ ಸಂಖ್ಯೆ ಏನು ಕಡಿಮೆ ಇಲ್ಲ. ಗ್ರಹಗಳ ದೋಷಗಳಿಂದಾಗಿ ಕೆಲವರ ಮದುವೆ ವಯಸ್ಸು ಮೀರಿದ್ರೂ ಆಗೋದಿಲ್ಲ. ಅಂತವರು ಕೆಲವೊಂದು ನಿಯಮಗಳನ್ನು ತಪ್ಪದೆ ಪಾಲಿಸುತ್ತ ಬಂದಲ್ಲಿ ದೋಷ ನಿವಾರಣೆಯಾಗಿ ಮದುವೆ ಬೇಗ ನೆರವೇರುತ್ತದೆ.
ಮದುವೆಯಾಗದವರು ಪ್ರತಿದಿನ ಕೆಂಪು ಬಣ್ಣದ ಆಕಳಿಗೆ ಆಹಾರವನ್ನು ನೀಡಬೇಕು.
ಸೋಮವಾರ ರುದ್ರಾಭಿಷೇಕ ಮಾಡಿಸಬೇಕು.
ಮಂಗಳವಾರ ಹಾಗೂ ಶನಿವಾರ ಸಂಜೆ 5 ಗಂಟೆ ನಂತ್ರ ಸುಂದರಕಾಂಡವನ್ನು ಓದಬೇಕು.
ನೀರಿನಲ್ಲಿ ಪ್ರತಿದಿನ ಸೂರ್ಯನನ್ನು ನೋಡಬೇಕು.
ಮಂಗಳವಾರ ಹನುಮಂತನಿಗೆ ಕುಂಕುಮವನ್ನು ಅರ್ಪಿಸಿ. ದನಕ್ಕೆ ಬೆಲ್ಲದಿಂದ ಮಾಡಿದ ಆಹಾರವನ್ನು ನೀಡಿ.