alex Certify ಬಹುಪಯೋಗಿ ʼಬಾಳೆಹಣ್ಣುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಪಯೋಗಿ ʼಬಾಳೆಹಣ್ಣುʼ

ಬಾಳೆ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು ಇದು ತ್ವಚೆಯನ್ನು ಆರೋಗ್ಯದಿಂದ ಇಡಲು ನೆರವಾಗುತ್ತದೆ. ಮುಖದ ಮೇಲೆ ಮೊಡವೆ ಹೆಚ್ಚಿದಂತೆ ಕನ್ನಡಿಯಿಂದ ದೂರ ಉಳಿಯುವವರಿಗೆ ಇದು ಬಲು ಉಪಕಾರಿ.

ಅಷ್ಟೇ ಅಲ್ಲ ಎಣ್ಣೆ ಚರ್ಮ ಹೊಂದಿದವರಿಗೆ ಮುಖದ ಮೇಲಿನ ಎಣ್ಣೆಯನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ.

ಬಾಳೆ ಹಣ್ಣಿಗೆ ಮೊಸರು ಬೆರೆಸಿ ಕೂದಲಿಗೆ ಹಚ್ಚಿ ಇದು ಕಂಡಿಷನರ್ ಪ್ರಭಾವವನ್ನೇ ಬೀರುತ್ತದೆ. ಹಾಗಾಗಿ ಮೊಟ್ಟೆ ಬಳಸಲು ಇಷ್ಟಪಡದ ಜನ ಇದರಿಂದ ಪ್ರಯೋಜನ ಪಡೆಯಬಹುದು.

ಪುಡಿ ಮಾಡಿದ ಓಟ್ಸ್ ಅನ್ನು ಬಾಳೆಹಣ್ಣಿನೊಂದಿಗೆ ಬೆರೆಸಿ ಬಾಡಿ ಸ್ಕ್ರಬ್ ಆಗಿಯೂ ಉಪಯೋಗಿಸಬಹುದು. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ. ಬಾಳೆಹಣ್ಣಿನ ತಿರುಳನ್ನು ಜೇನುತುಪ್ಪದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಮುಖಕ್ಕೆ ಪೇಸ್ ಪ್ಯಾಕ್ ಆಗಿ ಕೂಡ ಬಳಸಬಹುದು.
ಬಿರುಕು ಬಿಟ್ಟಿರುವ ಹಿಮ್ಮಡಿ ನೋವಿಗೆ ಹಿಸುಕಿದ ಬಾಳೆಹಣ್ಣನ್ನು ಹಚ್ಚಿ ಬಳಿಕ ಸಾಕ್ಸ್ ಹಾಕಿ ಮಲಗಿ. ಮರುದಿನ ತೊಳೆಯಿರಿ. ಇದರಿಂದ ನಿಮ್ಮ ಒಡೆದ ಹಿಮ್ಮಡಿ ನೋವು ಕಡಿಮೆಯಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...