ಕಹಿ ಬೇವು ಬಹುಪಯೋಗಿ ಗಿಡ. ಔಷಧಿ ಗುಣಗಳಿಂದ ಇದು ಸಮೃದ್ಧವಾಗಿದೆ. ಹಾಗಾಗಿ ಇದನ್ನು ಸಾಮಾನ್ಯರು ಹೆಚ್ಚಾಗಿ ಬಳಸ್ತಾರೆ. ಎಲೆ, ಬೀಜ ಎಲ್ಲವೂ ಬಹಳ ಉಪಯೋಗಕಾರಿ. ಚರ್ಮ, ಹೊಟ್ಟೆ, ಕಣ್ಣು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಕಹಿ ಬೇವಿನ ಎಲೆಯಲ್ಲಿ ಸೋಂಕು ನಿವಾರಿಸುವ ಶಕ್ತಿಯಿದೆ. ಆದ್ರೆ ಹೆಚ್ಚು ಸೇವನೆಯಿಂದ ನಪುಂಸಕತೆ ಕಾಡುವ ಸಾಧ್ಯತೆಯಿರುತ್ತದೆ.
ಧಾರ್ಮಿಕ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಬೇವಿನ ಎಲೆಗೆ ಪ್ರಾಮುಖ್ಯತೆಯಿದೆ. ದೇವಿ ಹಾಗೂ ಶಕ್ತಿ ಪೂಜೆಯಲ್ಲಿ ಬೇವಿನ ಎಲೆಯನ್ನು ಬಳಸಲಾಗುತ್ತದೆ.
ತಾಯಿ ಶೀತಲಾ ಹಾಗೂ ತಾಯಿ ಕಾಳಿ ಪೂಜೆಗೆ ಬೇವಿನ ಎಲೆಯನ್ನು ಪ್ರಯೋಗ ಮಾಡ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಹಿ ಬೇವನ್ನು ಶನಿ ಹಾಗೂ ರಾಹುವಿನ ಪೂಜೆಯಲ್ಲೂ ಪ್ರಯೋಗ ಮಾಡಲಾಗುತ್ತದೆ.
ಶನಿ ಶಾಂತಿಗಾಗಿ ಕಹಿ ಬೇವಿನ ಬೇರನ್ನು ಹವನಕ್ಕೆ ಬಳಸಿದ್ರೆ ತ್ವರಿತ ಪರಿಣಾಮ ಬೀರುತ್ತದೆ.
ಕಹಿ ಬೇವಿನ ಎಲೆಯನ್ನು ನೀರಿಗೆ ಹಾಕಿ ಸ್ನಾನ ಮಾಡಿದ್ರೆ ರಾಹು ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ.
ಕಹಿ ಬೇವಿನ ಬೇರಿನಿಂದ ಮಾಡಿದ ಯಂತ್ರ ಫಲದಾಯಕವಾಗಿರುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ಕಹಿ ಬೇವಿನ ಎಲೆಯನ್ನು ಹಾಕುವುದು ಶುಭಕರ.