ಸುದೀರ್ಘ ಇತಿಹಾಸ ಹೊಂದಿರುವ ಹಾಗೂ 38 ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ನಿರ್ವಹಿಸುತ್ತಿರುವ ಭಾರತೀಯ ಜೀವ ವಿಮಾ ನಿಗಮ ಷೇರು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಮೇ 4ರ ನಾಳೆಯಿಂದ ಮೆಗಾ ಆರಂಭಿಕ ಷೇರು ಬಿಡುಗಡೆ ಆರಂಭವಾಗಲಿದೆ.
ಹೂಡಿಕೆದಾರರು ಬಹುಕಾಲದಿಂದ ಇದರ ನಿರೀಕ್ಷೆಯಲ್ಲಿದ್ದು, ಆದರೆ ರಷ್ಯಾ -ಉಕ್ರೇನ್ ನಡುವಿನ ಸಮರದಿಂದಾಗಿ ಷೇರು ಬಿಡುಗಡೆ ದಿನಾಂಕ ಈವರೆಗೆ ನಿಗದಿಯಾಗಿರಲಿಲ್ಲ. ಕೊನೆಗೂ ಇದಕ್ಕೆ ದಿನಾಂಕ ಕೂಡಿಬಂದಿದ್ದು, ಹೂಡಿಕೆದಾರರಲ್ಲಿ ಅತ್ಯುತ್ಸಾಹ ಕಂಡುಬಂದಿದೆ.
ಎಲ್ಐಸಿ ಐಪಿಒ ಮೇ 9ರಂದು ಮುಕ್ತಾಯಗೊಳ್ಳಲಿದ್ದು, ಮೇ 12ರಂದು ಶೇರುಗಳ ಮಂಜೂರಾತಿ ಅಂತಿಮವಾಗಲಿದೆ. ಮಾರುಕಟ್ಟೆ ತಜ್ಞರು ಸಹ ಮೊದಲ ಬಾರಿ ಷೇರುಗಳಲ್ಲಿ ಹೂಡಿಕೆ ಮಾಡುತ್ತಿರುವವರು ಸಹ ಎಲ್ಐಸಿ ಷೇರುಗಳನ್ನು ಖರೀದಿಸಬಹುದು ಎಂದು ಶಿಫಾರಸು ಮಾಡಿದ್ದಾರೆ.