ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಪರ್ಧೆಯೊಂದರ ನಿಮಿತ್ತ ನೂಪುರ್ ಇಟಲಿಗೆ ತೆರಳಿದ್ದು, ಅಲ್ಲಿಯೇ ತನ್ನ ಗೆಳತಿ ಇರಾಗೆ ಪ್ರಪೋಸ್ ಮಾಡಿದ್ದಾರೆ.
ಇರಾ ಖಾನ್ ಬಳಿ ಬಂದ ನೂಪುರ್ ಶಿಖರೆ, ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದ್ದು ಇದಕ್ಕೆ ಇರಾ ಎಸ್ ಎಂದಿದ್ದಾರೆ. ಆಗ ಸುತ್ತಲಿದ್ದವರೆಲ್ಲರೂ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದು, ಈ ವೇಳೆ ನೂಪುರ್, ಇರಾಗೆ ಉಂಗುರ ತೊಡಿಸಿದ್ದಾರೆ.
ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ವಿಡಿಯೋ ಸಹಿತ ಈ ಖುಷಿಯನ್ನು ಹಂಚಿಕೊಂಡಿದ್ದು, ನೆಟ್ಟಿಗರೂ ಸಹ ಅಭಿನಂದನೆಗಳ ಸುರಿಮಳೆಗೈದಿದ್ದಾರೆ. ನೂಪುರ್ ಹಾಗೂ ಇರಾ ಬಹು ಕಾಲದಿಂದಲೂ ಪರಸ್ಪರ ಪ್ರೀತಿಯಲ್ಲಿದ್ದು, ಉಭಯ ಕುಟುಂಬಗಳ ಸದಸ್ಯರೂ ಸಹ ತಮ್ಮ ಸಮ್ಮತಿ ವ್ಯಕ್ತಪಡಿಸಿದ್ದರು.