ಜಗತ್ತಿನಲ್ಲಿ ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳುವುದೇ ಈಗಿರುವ ಬಹುದೊಡ್ಡ ಸವಾಲು. ತೂಕ ಇಳಿಸಿಕೊಳ್ಳಲು ಹಲವು ಆರೋಗ್ಯಕರ ತಂತ್ರಗಳಿದ್ದರೂ ಕೆಲವರು ತಪ್ಪು ವಿಧಾನಗಳನ್ನು ಬಳಸುತ್ತಾರೆ. ಉದಾಹರಣೆಗೆ ಊಟವನ್ನು ಬಿಡುವುದು, ಅಗತ್ಯಕ್ಕಿಂತ ಕಡಿಮೆ ಆಹಾರವನ್ನು ಸೇವಿಸುವುದು ಮತ್ತು ಲಘು ಉಪಹಾರ ಇತ್ಯಾದಿ. ತೂಕ ಇಳಿಸಿಕೊಳ್ಳಲು ನೀವು ಸಹ ಈ ವಿಧಾನಗಳನ್ನು ಅಳವಡಿಸಿಕೊಂಡಿದ್ದರೆ ತಕ್ಷಣವೇ ನಿಲ್ಲಿಸಿ.
ಅದರ ಬದಲು ಪೋರ್ಶನ್ ಕಂಟ್ರೋಲ್ ಕಡೆಗೆ ಗಮನಕೊಡಿ. ಪೋರ್ಶನ್ ಕಂಟ್ರೋಲ್ ಎಂದರೆ ನೀವು ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಕಾಳಜಿ ವಹಿಸುವುದು. ಇದರಲ್ಲಿ ಕ್ಯಾಲೊರಿಗಳ ಪ್ರಮಾಣವು ಕಡಿಮೆಯಿರಬೇಕು ಮತ್ತು ಅಗತ್ಯ ಪೋಷಕಾಂಶಗಳ ಪ್ರಮಾಣವು ಹೆಚ್ಚಿರಬೇಕು. ನೀವು ಕಡಿಮೆ ಕ್ಯಾಲೋರಿಗಳನ್ನು ತೆಗೆದುಕೊಂಡಾಗ, ದೇಹವು ಶಕ್ತಿಗಾಗಿ ಹೆಚ್ಚುವರಿ ಕೊಬ್ಬನ್ನು ಬಳಸುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೋರ್ಷನ್ ಕಂಟ್ರೋಲ್ ಎಂದರೆ ಕಡಿಮೆ ಆಹಾರ ಸೇವಿಸುವುದು ಅಥವಾ ಒಂದು ಹೊತ್ತಿನ ಊಟವನ್ನು ಬಿಟ್ಟುಬಿಡುವುದು ಎಂದಲ್ಲ. ಆದರೆ ಹೊಟ್ಟೆ ಸಂಪೂರ್ಣ ಭರ್ತಿಯಾಗುವವರೆಗೆ ತಿನ್ನಬಾರದು. ಪೋರ್ಶನ್ ಕಂಟ್ರೋಲ್ ಮೂಲಕ ತೂಕವನ್ನು ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ಆಹಾರದಲ್ಲಿ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಿ ಮತ್ತು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಿ.
ಹಸಿರು ತರಕಾರಿಗಳನ್ನು ತಪ್ಪದೇ ತಿನ್ನಬೇಕು. ಜೊತೆಗೆ ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಕೂಡ ಬಹಳ ಮುಖ್ಯ. ತುಂಬಾ ಹಸಿವೆ ಆಗುವವರೆಗೂ ಕಾಯಬಾರದು. ಹಾಗೆ ಮಾಡಿದರೆ ಅತಿಯಾಗಿ ತಿನ್ನುವ ಸಾಧ್ಯತೆ ಇರುತ್ತದೆ. ಊಟ-ಉಪಹಾರವನ್ನು ಮಿತವಾಗಿ ತಿನ್ನಬೇಕು. ಹೊಟ್ಟೆ ಭರ್ತಿಯಾಗುವವರೆಗೂ ತಿಂದರೆ ತೂಕ ಹೆಚ್ಚಾಗುವ ಅಪಾಯವು ಸ್ವಯಂಚಾಲಿತವಾಗಿ ಉದ್ಭವಿಸುತ್ತದೆ.
ಏಕೆಂದರೆ ಅತಿಯಾಗಿ ತಿನ್ನುವುದು ಕೂಡ ತೂಕ ಹೆಚ್ಚಾಗಲು ದೊಡ್ಡ ಕಾರಣ. ಸಂಜೆಯ ನಂತರ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ರಾತ್ರಿಯ ಊಟ ಸಾಧ್ಯವಾದಷ್ಟು ಲೈಟ್ ಆಗಿರಲಿ. ಹೊರಗಿನಿಂದ ತರಿಸಿದ ಅಥವಾ ಹೋಟೆಲ್, ರೆಸ್ಟೋರೆಂಟ್ಗಳ ಅನಾರೋಗ್ಯಕರ ತಿನಿಸುಗಳ ಸೇವನೆ ಬೇಡ. ಅವುಗಳು ಹೆಚ್ಚಿನ ಸಕ್ಕರೆ, ಉಪ್ಪು ಮತ್ತು ಹೇರಳವಾಗಿ ಸಂಸ್ಕರಿಸಿದ ಮೈದಾ, ಕೆಟ್ಟ ಎಣ್ಣೆಯಲ್ಲಿ ತಯಾರಾಗಿರುತ್ತವೆ.