ಚಾಲಕನ ಸೀಟಿನಲ್ಲಿ ಕುಳಿತು ಅದರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಮಹಿಳಾ ಕಂಡಕ್ಟರ್ ರನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಂಡ ಕಂಡಕ್ಟರ್ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸಾಗರ್ ಮಂಗಳ ಗೋವರ್ಧನ್ ಅಮಾನತುಗೊಂಡ ಕಂಡಕ್ಟರ್ ಆಗಿದ್ದು, ಇವರು MSRTC ಯ ಒಸ್ಮಾನಾಬಾದ್ ಜಿಲ್ಲೆ ಕಾಳಂಬ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆಯೂ ದುರ್ವರ್ತನೆ ತೋರಿದ ಕಾರಣಕ್ಕೆ ಇವರ ವಿರುದ್ಧ ದೂರು ದಾಖಲಾಗಿತ್ತು ಎನ್ನಲಾಗಿದೆ.
ಇನ್ನು ತಮ್ಮನ್ನು ಅಮಾನತು ಮಾಡಿರುವ ಕುರಿತಂತೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳಾ ಕಂಡಕ್ಟರ್ ಸಾಗರ್ ಮಂಗಳ ಗೋವರ್ಧನ್, ಈ ಹಿಂದೆ ಸಾರಿಗೆ ನೌಕರರು ಮುಷ್ಕರ ಕೈಗೊಂಡ ವೇಳೆ ನಾನು ಅದರಲ್ಲಿ ಭಾಗವಹಿಸದೆ ಕಾರ್ಯನಿರ್ವಹಿಸಿದ್ದೆ. ಹೀಗಾಗಿ ದುರುದ್ದೇಶದಿಂದ ಅಮಾನತು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.